ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ ವತಿಯಿಂದ ನಂದನಗದ್ದಾ ಆಶಾ ನಾಯಕ ಪ್ರಾಥಮಿಕ ಶಾಲೆಯಲ್ಲಿಯ ವಿದ್ಯಾರ್ಥಿಗಳಿಗೆ ದಂತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಪ್ರಾರಂಭದಲ್ಲಿ ರೋಟರಿ ಅಧ್ಯಕ್ಷ ರಾಘವೇಂದ್ರ ಜಿ.ಪ್ರಭು ಎಲ್ಲರನ್ನು ಸ್ವಾಗತಿಸುತ್ತ, ಪ್ರಸ್ತುತ ವರ್ಷದಲ್ಲಿ ಸಾಧ್ಯವಾದಷ್ಟು ಶಾಲೆಗಳಲ್ಲಿ ಸಣ್ಣ ವಿದ್ಯಾರ್ಥಿಗಳಿಗೆ ಉಚಿತ ದಂತ ಸಪಾಸಣಾ ಶಿಬಿರವನ್ನು ಆಯೋಜಿಸಿ, ಅವಶ್ಯಕತೆ ಇದ್ದರೆ ಚಿಕಿತ್ಸೆಯನ್ನೂ ನೀಡುವ ಯೋಜನೆಯನ್ನ ಹಮ್ಮಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಶಿವಾನಂದ ಕಾಮತ ಅವರನ್ನು ಸನ್ಮಾನಿಸಲಾಯಿತು. ಡಾ.ಸಮೀರಕುಮಾರ ನಾಯಕ ಅವರು ಹಲ್ಲುಗಳ ರಕ್ಷಣೆ, ಸ್ವಚ್ಛವಾಗಿಡುವ ವಿಧಾನ ಮತ್ತು ಹಲ್ಲುಗಳ ಉಪಯೋಗವನ್ನು ವಿದ್ಯಾರ್ಥಿಗಳಿಗೆ ಸೊಗಸಾಗಿ ವಿವರಿಸಿ ಹೇಳಿದರು. ನಂತರ ಸುಮಾರು 200 ವಿದ್ಯಾರ್ಥಿಗಳ ಹಲ್ಲುಗಳನ್ನು ತಪಾಣೆ ಮಾಡಿ ಸಲಹೆಗಳನ್ನು ನೀಡಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಟೂತ್ ಪೇಸ್ಟ್ ಹಾಗೂ ಟೂತ್ ಬ್ರಷ್‌ಗಳನ್ನು ವಿತರಿಸಲಾಯಿತು. ಟೂತ್ ಪೇಸ್ಟ ಹಾಗೂ ಟೂತ್ ಬ್ರಷ್‌ಗಳನ್ನು ಮಾಧವ ನೇವರೇಕರ ಪ್ರಾಯೋಜಿಸಿದ್ದರು.
ಕಾರ್ಯರ್ಶಿ ಗುರುದತ್ತ ಬಂಟರವರು ವಂದಿಸಿದರು. ಕಾರ್ಯಕ್ರಮವನ್ನು ಶೈಲೇಶ ಹಳದಿಪೂರ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಮುಖ್ಯಾಧ್ಯಾಪಕರು, ಶಿಕ್ಷಕರು, ರೋಟರಿ ಸದಸ್ಯರು ಉಪಸ್ಥಿತರಿದ್ದರು.