• Slide
    Slide
    Slide
    previous arrow
    next arrow
  • ಮೈಸೂರು–ತಾಳಗುಪ್ಪ ಪ್ಯಾಸೆಂಜರ್ ರೈಲು ಸಂಚಾರ ಮತ್ತೆ ಆರಂಭ

    300x250 AD

    ಶಿವಮೊಗ್ಗ: ಕೋವಿಡ್‌ ಎರಡನೇ ಅಲೆಯಲ್ಲಿ ಸ್ಥಗಿತಗೊಂಡಿದ್ದ ಮೈಸೂರು – ತಾಳಗುಪ್ಪ ಪ್ಯಾಸೆಂಜರ್ ರೈಲು ಸಂಚಾರ ಮತ್ತೆ ಆರಂಭವಾಗಲಿದೆ.
    ಇದೇ ಜುಲೈ 25ರಿಂದ ಪ್ಯಾಸೆಂಜರ್ ರೈಲು ಸಂಚಾರ ಆರಂಭವಾಗಲಿದ್ದು, ಮಧ್ಯಾಹ್ನ 2 ಗಂಟೆಗೆ ಮೈಸೂರಿನಿಂದ ಹೊರಡುವ ರೈಲು, ರಾತ್ರಿ 11:30ಕ್ಕೆ ತಾಳಗುಪ್ಪ ತಲುಪುತ್ತದೆ. ಇನ್ನು ಮಾರನೇ ದಿನ ಬೆಳಿಗ್ಗೆ 6:10ಕ್ಕೆ ತಾಳಗುಪ್ಪದಿಂದ ಹೊರಡುವ ರೈಲು, ಮಧ್ಯಾಹ್ನ 3.35 ಕ್ಕೆ ಮೈಸೂರು ತಲುಪುತ್ತದೆ. ರೈಲಿನಲ್ಲಿ 12 ಬೋಗಿಗಳು ಇರಲಿವೆ. ಇದರಲ್ಲಿ 10 ಸೆಕೆಂಡ್ ಕ್ಲಾಸ್ ಬೋಗಿಗಳು ಹಾಗೂ 2 ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳು. ಜುಲೈ 25ರಿಂದ ಆ 16221 ಹಾಗೂ 16222 ಸಂಖ್ಯೆಯ ರೈಲುಗಳು ಕಾರ್ಯಾರಂಭ ಮಾಡಲಿವೆ.

    ಮೈಸೂರಿನಿಂದ ತಾಳಗುಪ್ಪಕ್ಕೆ ತೆರಳುವ ರೈಲು ಸಂಚರಿಸುವ ನಿಲ್ದಾಣಗಳ ಸಮಯ ಪಟ್ಟಿ
    ಮೈಸೂರು – ಮಧ್ಯಾಹ್ನ 2 ಗಂಟೆಗೆ ಹೊರಡುತ್ತದೆ. ಹಾಸನ – 4:28, ಅರಸೀಕೆರೆ – ಸಂಜೆ 6 ಗಂಟೆ, ಬೀರೂರು- 7 ಗಂಟೆ, ತರೀಕೆರೆ – 7:39, ಭದ್ರಾವತಿ – 8:03, ಶಿವಮೊಗ್ಗ – 8:45, ಆನಂದಪುರ – 10:14, ಸಾಗರ- 10:44, ತಾಳಗುಪ್ಪ- 11:30.

    300x250 AD

    ತಾಳಗುಪ್ಪದಿಂದ ಮೈಸೂರಿಗೆ ತೆರಳುವ ರೈಲು ಸಂಚರಿಸುವ ನಿಲ್ದಾಣಗಳ ಸಮಯಪಟ್ಟಿ
    ತಾಳಗುಪ್ಪ – ಬೆಳಿಗ್ಗೆ 6:10, ಸಾಗರ – 6:34, ಆನಂದಪುರ- 7:06, ಶವಮೊಗ್ಗ – 8:15, ಭದ್ರಾವತಿ – 8:43, ತರೀಕೆರೆ – 9:13, ಬೀರೂರು – 10:03, ಕಡೂರು – 10:15, ಅರಸೀಕೆರೆ- 11:15, ಹಾಸನ – 12:28, ಮೈಸೂರು – 3:35.

    Share This
    300x250 AD
    300x250 AD
    300x250 AD
    Leaderboard Ad
    Back to top