• Slide
    Slide
    Slide
    previous arrow
    next arrow
  • ‘ಪ್ರೀತಿಪದ’ ಸಮಾಜವಿಜ್ಞಾನ ಅಧ್ಯಯನ ಕೇಂದ್ರ ಉದ್ಘಾಟನೆ

    300x250 AD

    ಕುಮಟಾ: ಪರ್ತಕರ್ತರು ಸಮಾಜಮುಖಿಗಳಾಗದೆ, ವ್ಯವಸ್ಥೆಯ ಮೇಲಿನ ಸಿಟ್ಟನ್ನು ಬರೆಯಲಾಗದ ಸ್ಥಿತಿಯಲ್ಲಿದ್ದಾರೆ. ದುಷ್ಟ ವ್ಯವಸ್ಥೆಯ ವಿರುದ್ಧ ಪ್ರತಿರೋಧ ಇಲ್ಲದಿದ್ದರೆ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುವುದಿಲ್ಲ ಎಂದು ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಹೇಳಿದರು.

    ಅವರು ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡಮಕ್ಕಳ ವಿದ್ಯಾರ್ಥಿ ನಿಲಯಕ್ಕೆ ಅಕ್ಕಿ ಆಹಾರಧಾನ್ಯ ನೀಡಿ ‘ಪ್ರೀತಿಪದ’ ಡಾ. ವಿಠಲ ಭಂಡಾರಿ ನೆನಪಿನ ಸಮಾಜವಿಜ್ಞಾನ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ. ಎನ್.ವಾಸರೆ, ವಿಠಲ ಭಂಡಾರಿಯವರು ಬಹುತ್ವವನ್ನು ನಂಬಿದವರು. ಅವರ ಕನಸುಗಳನ್ನು ನನಸು ಮಾಡಿ ಆತನನ್ನು ಜೀವಂತವಾಗಿರಿಸಿಕೊಳ್ಳಬೇಕಾದ ನಮ್ಮಅನಿವಾರ್ಯತೆ, ಬರಹಗಾರರು ಬರೆಯುವಾಗ ಪ್ರಭುತ್ವದ ಮುಲಾಜಿಗೆ ಒಳಗಾಗುತ್ತಿದ್ದಾರೆ. ನೇರ ನಿಷ್ಠುರವಾಗಿ ಬರೆದು ಜಿಲ್ಲೆಯಲ್ಲಿ ಸಾಂಸ್ಕೃತಿಕ ಆಂದೋಲನವನ್ನು ಕಟ್ಟಿ ಮುನ್ನಡೆಸುವಲ್ಲಿ ವಿಠಲರ ಪಾತ್ರ ದೊಡ್ಡದು ಎಂದರು.

    ಅರ್ಥಶಾಸ್ತ್ರ ವಿಶ್ಲೇಷಕ ಡಾ.ಚಂದ್ರ ಪೂಜಾರಿ, ಭಾರತ ಜಾತಿ ಧರ್ಮಗಳ ಹೆಸರಿನಲ್ಲಿ ಒಡೆದುಹೋಗುತ್ತಿದೆ. ರಾಜಕೀಯ ಪಕ್ಷಗಳು ದೇಶಗಳು ಮುನ್ನಡೆಸುವ ಬದಲು ಹಿಮ್ಮುಖವಾಗಿ ತಳ್ಳುತ್ತಿವೆ.ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಬಾರದು, ಅವರ ಆಹಾರದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಕೊಡಬಾರದು ಎಂಬ ಅತ್ಯಂತ ಅಪಾಯಕಾರಿ ಸಾಂಸ್ಕೃತಿಕ ರಾಜಕಾರಣ ದೇಶದಲ್ಲಿ ನಡೆಯುತ್ತಿದೆ.ಹಸುವಿನ ಹಾಲು ಉತ್ತಮವೋ ಎಮ್ಮೆಯ ಹಾಲು ಉತ್ತಮವೋ ಮಾಂಸಾಹಾರ ಉತ್ತಮವೋ ಸಸ್ಯಾಹಾರ ಉತ್ತಮವೋ ಎನ್ನುವ ಚರ್ಚೆ ಆರಂಭವಾಗಿದೆ. ಫೈಬರ್ ಮತ್ತು ಕ್ವಾಲೆಸ್ಟಾಲ್ ಅಂಶ ಬಿಟ್ಟರೆ ಸಸ್ಯಾಹಾರಕ್ಕಿಂತ ಮಾಂಸಾಹಾರವೇ ಉತ್ತಮವಾಗಿದ್ದು, ಭಾರತದಲ್ಲಿ ಶೇ 30ರಷ್ಟು ಮಕ್ಕಳು ಅಪೌಷ್ಟಿಕತೆಯಿಂದಲೂ ಶೇ 50ರಷ್ಟು ಹೆಣ್ಣುಮಕ್ಕಳು ರಕ್ತ ಹೀನತೆಯಿಂದಲೂ ನರಳುತ್ತಿದ್ದಾರೆ ಎಂದರು. ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕಿರಣ ಗಾಜನೂರು ಮಾತನಾಡಿ, ಭಾರತೀಯರಾದ ನಾವು ಅಪ್ರಜಾತಾಂತ್ರಿಕ ಯುದ್ಧವನ್ನು ಪ್ರಜಾತಾಂತ್ರಿಕವಾಗಿ ಎದುರಿಸುವ ಹಂತದಲ್ಲಿದ್ದೇವೆ. ಖಾಸಗಿಕರಣ ಸೃಷ್ಟಿಸಿರುವ ಉದ್ಯೋಗದ ಸ್ವರೂಪ ಅತ್ಯಂತ ಅಮಾನವೀಯವಾಗಿದ್ದು ಹೆಣ್ಣು ಮಕ್ಕಳೂ ಸೇರಿಸದಂತೆ ಯುವಕರನ್ನು ಹೆಚ್ಚು ಶೋಷಣೆಗೆ ಒಳಪಡಿಸಲಾಗುತ್ತಿದೆ ಎಂದರು.

    300x250 AD

    ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ರಾಮಾ ನಾಯ್ಕ, ಯಮುನಾ ಗಾಂವರ್ ಹಾಗೂ ಗಣೇಶ ಭಿಷ್ಟಣ್ಣವರ್ ಮಾತನಾಡಿದರು.ಸಹಯಾನದ ಮ್ಯಾನೇಜಿಂಗ್ ಟ್ರಸ್ಟೀ ಮಾಧವಿ ಭಂಡಾರಿ, ಕಸಾಪ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡೀಸ್, ಕಲ್ಲೂರು ಶಿಕ್ಷಣ ಸಂಸ್ಥೆಯ ಇಬ್ರಾಹಿಂ ಕಲ್ಲೂರು, ಜನಶಕ್ತಿ ಮೀಡಿಯಾದ ನವೀನಕುಮಾರ ಹಾಸನ, ಗಣೇಶ್ ರಾಠೋಡ, ಡಾ. ಮಹೇಶ ಗೋಳಿಕಟ್ಟಿ, ಜಿಡಿ ಮನೋಜೆ, ಎಂ.ಎ.ಖತೀಬ್, ಅಲ್ತಾಫ್ ಶೇಖ್, ಎನ್. ಜಿ. ನಾಯ್ಕ, ಜಿ.ಡಿ.ಪಾಲೇಕರ್, ಮೋಹನ ಕಿಂದಳಕ‌ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top