ಶಿರಸಿ: ಎಂ.ಇ.ಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಕ್ಯುಎಸಿ ಸಂಯೋಜನೆಯಲ್ಲಿ ಭೂಮಿಕಾ ವಿಭಾಗ ಹಾಗೂ ಗ್ರಂಥಾಲಯದ ಸಹಯೋಗದಲ್ಲಿ ಕಂಪ್ಯೂಟರ್ ಕೌಶಲ್ಯ ಮತ್ತು ಇಲೆಕ್ಟ್ರಾನಿಕ್ ಗ್ರಂಥಾಲಯದ ಕುರಿತು ಬಿ ಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಒಂದು ತಿಂಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ತರಬೇತಿ ಕಾರ್ಯಕ್ರಮವನ್ನು ಕಾಲೇಜು ಉಪಸಮಿತಿ ಸದಸ್ಯರಾದ ಲೋಕೇಶ್ ಹೆಗಡೆ ಉದ್ಘಾಟಿಸಿದರು. ಅವರು ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಕಲಿಯುವ ವಿಧ್ಯಾರ್ಥಿಗಳಿಗೆ ಕೌಶಲ್ಯ ಪೂರಣ ಮಾಡುವ ಎಲ್ಲಾ ರೀತಿಯ ವ್ಯವಸ್ಥೆ ಮಾಡಲು ನಾವು ಸದಾ ಬದ್ಧವಾಗಿದ್ದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೇ ನಮ್ಮ ಗುರಿ ಎಂದರು. ಎಲೆಕ್ಟ್ರಾನಿಕ್ ಗ್ರಂಥಾಲಯ ದಂತ ಆಧುನಿಕ ಸೌಕರ್ಯ ಇಂದಿನ ಓದಿಗೆ ಪೂರಕವಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ ಟಿ ಎಸ್ ಹಳೆಮನೆ, ಭೂಮಿಕಾ ಸಂಚಾಲಕಿ ಶೈಲಜಾ ಭಟ್, ಪ್ರೊ ಪರಿಮಳಾ ದೇಶಪಾಂಡೆ, ಗ್ರಂಥ ಪಾಲಕಿ ಶಾರದಾ ಭಟ್, ಹಾಗೂ ತರಬೇತುದಾರರಾದ ಸರಸ್ವತಿ ಕಂಬಾರ್ ಉಪಸ್ಥಿತರಿದ್ದರು.