• Slide
  Slide
  Slide
  previous arrow
  next arrow
 • ನಾಡವರ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ

  300x250 AD

  ದಾಂಡೇಲಿ: ನಗರದ ನಾಡವರ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಟೌನಶಿಪ್‌ನಲ್ಲಿರುವ ನಾಡವರ ಸಂಘದ ಸಭಾಭವನದಲ್ಲಿ ನಡೆಯಿತು.

  ಧಾರವಾಡದ ವೈದ್ಯ ಡಾ.ಸಫನ್ ದೇವರಬಾವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಾಂಡೇಲಿಯ ನಾಡವರ ಸಮಾಜದ ಕಾರ್ಯಚಟುವಟಿಕೆಗಳು ಶ್ಲಾಘನೀಯವಾಗಿದೆ. ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಕ್ಕಳನ್ನು ಶಿಕ್ಷಣವಂತರನ್ನಾಗಿಸುವುದರ ಜೊತೆಗೆ ಸುಸಂಸ್ಕೃತರನ್ನಾಗಿಸುವ ಜವಾಬ್ದಾರಿಯು ನಮ್ಮದೆಂಬ ಅರಿವನ್ನು ಹೊಂದಿರಬೇಕು. ಇವತ್ತು ನಾನಾ ಕ್ಷೇತ್ರಗಳಲ್ಲಿ ನಾಡವರ ಸಮಾಜದ ಬಂಧುಗಳು ಅಗ್ರಣೀಯ ಸಾಧನೆ ಮಾಡುತ್ತಿರುವುದು ಸಮಾಜಕ್ಕೊಂದು ದೊಡ್ಡ ಗೌರವ ಎಂದರು.

  ಹುಬ್ಬಳ್ಳಿಯ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಕೀರ್ತಿ ಎಚ್.ನಾಯಕ ಮಾತನಾಡಿ, ಜೀವನದಲ್ಲಿ ಗುರಿಯಿರಬೇಕು. ಗುರಿಯನ್ನು ಈಡೇರಿಸಿಕೊಳ್ಳಲು ಶ್ರಮವಹಿಸಿ ಮುನ್ನುಗ್ಗಬೇಕು. ವಿದ್ಯಾರ್ಥಿಗಳು ಸತತವಾದ ಅಧ್ಯಯನದಲ್ಲಿ ತೊಡಗಿ ಜೀವನದ ಗುರಿ ಸಾಧಿಸಬೇಕೆಂದು ಕರೆ ನೀಡಿ, ಪರಿಶ್ರಮಕ್ಕೆ ಫಲವಿದೆ ಎನ್ನುವ ನಂಬಿಕೆಯನ್ನಿಟ್ಟುಕೊAಡು ಮುಂದಡಿಯಿಡಬೇಕೆಂದು ಕರೆ ನೀಡಿದರು. ಇನ್ನೋರ್ವ ಮುಖ್ಯ ಅತಿಥಿ ಡಾ.ತೃಪ್ತಿ ತೊರ್ಕೆಯವರು ಸಂದರ್ಭೋಚಿತವಾಗಿ ಮಾತನಾಡಿದರು.

  ಕಾರ್ಯಕ್ರಮದಲ್ಲಿ ಸೇವಾ ನಿವೃತ್ತರಾದ ಪಾಂಡುರಂಗ ನಾಯಕ, ಅರವಿಂದ ನಾಯಕ, ಜೀವನಾ ನಾಯಕ, ಇಂದಿರಾ ನಾಯಕ, ಲಕ್ಷ್ಮಣ ಎಸ್.ನಾಯಕ ಮತ್ತು ಶಾಂತಾ ವಾಸುದೇವ ನಾಯಕ ಅವರನ್ನು ಸನ್ಮಾನಿಸಲಾಯಿತು. ಏಳನೇ ತರಗತಿ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

  300x250 AD

  ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯರಾದ ಜೀವನಾ ನಾಯಕ, ನಮ್ಮ ಸಮಾಜದಿಂದ ದೊರೆತ ಸನ್ಮಾನ ಅತ್ಯಂತ ಮಹತ್ವಪೂರ್ಣವಾದ ಸನ್ಮಾನ. ಈ ಸನ್ಮಾನದಲ್ಲಿ ಮಾತೃ ವಾತ್ಸಲ್ಯವಿದೆ ಎಂದ ಅವರು ನನ್ನ ಇಷ್ಟು ವರ್ಷಗಳ ಸೇವೆಗೆ ಸಮಾಜದ ಬಂಧುಗಳು ನೀಡಿದ ಸಹಕಾರ, ಪ್ರೋತ್ಸಾಹ ಸದಾ ಸ್ಮರಣೀಯ ಎಂದರು.

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡವರ ಸಮಾಜದ ಅಧ್ಯಕ್ಷ ಕೀರ್ತಿ ಗಾಂವಕರ, ನಮ್ಮ ಸಮಾಜ ನಮ್ಮ ಹೆಮ್ಮೆ. ಸಮಾಜದ ಪ್ರತಿಯೊಬ್ಬರ ಸಾಧನೆಯು ನಮ್ಮ ಸಮಾಜದ ಗೌರವವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬ ಮಹತ್ವದ ಉದ್ದೇಶದಡಿ ಪ್ರತಿಭಾ ಪುರಸ್ಕಾರ ಕರ‍್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು. ಸಮಾಜದ ಸಮಗ್ರ ಅಭಿವೃದ್ಧಿಗೆ ಸರ್ವರ ಸಹಕಾರವಿರಲೆಂದರು.

  ವೇದಿಕೆಯಲ್ಲಿ ಸಮಾಜದ ಹಿರಿಯರಾದ ಅಶೋಕ ನಾಯಕ, ರಾಧಾ ನಾಯಕ, ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎನ್.ವಾಸರೆ, ಕಾರ್ಯದರ್ಶಿ ಸುಭಾಸ ನಾಯಕ ಮೊದಲಾದವರು ಉಪಸ್ಥಿತರಿದ್ದರು. ರವಿ ಗಾಂವಕರ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಖಜಾಂಚಿ ಮಿಥುನ್ ನಾಯಕ ವಂದಿಸಿದರು. ಜಲಜಾ ವಾಸರೆ ಮತ್ತು ದೀಪ್ತಿ ನಾಯಕ ಕಾರ್ಯಕ್ರಮ ನಿರೂಪಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top