• Slide
    Slide
    Slide
    previous arrow
    next arrow
  • ‘ಜಾಗತಿಕ ಹೂಡಿಕೆದಾರರ ಶೃಂಗಸಭೆ-2023’ಗೆ ಸಜ್ಜಾಗುತ್ತಿದೆ ಯುಪಿ

    300x250 AD

    ಲಕ್ನೋ: ಉತ್ತರ ಪ್ರದೇಶ  2023 ರ ಜನವರಿಯಲ್ಲಿ  ‘ಯುಪಿ ಜಾಗತಿಕ ಹೂಡಿಕೆದಾರರ ಶೃಂಗಸಭೆ’ ನಡೆಸಲಿದ್ದು, ಇದರಲ್ಲಿ 10 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರ ಸುಧಾರಣೆ, ಸಾಧನೆ ಮತ್ತು ಪರಿವರ್ತನೆ’ ಮಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತರ ಪ್ರದೇಶವು ದೇಶದಲ್ಲಿ ಕೈಗಾರಿಕಾ ಹೂಡಿಕೆಯ ‘ಕನಸಿನ ತಾಣ’ವಾಗಿ ಹೊರಹೊಮ್ಮಿದೆ.ಯುಪಿ ಜಾಗತಿಕ ಹೂಡಿಕೆದಾರರ ಶೃಂಗಸಭೆ-2023 ಉತ್ತರ ಪ್ರದೇಶದ ಹೊಸ ಆಕಾಂಕ್ಷೆಗಳಿಗೆ ರೆಕ್ಕೆ ನೀಡಲಿದೆ.ಐದು ವರ್ಷಗಳ ಹಿಂದೆ, ರಾಜ್ಯದ ಆರ್ಥಿಕತೆಯು ದೇಶದಲ್ಲಿ ಐದನೇ ಅಥವಾ ಆರನೇ ಸ್ಥಾನದಲ್ಲಿತ್ತು, ಆದರೆ ಪ್ರಸ್ತುತ, ಇದು ದೇಶದ ಎರಡನೇ ಅತಿದೊಡ್ಡ ಆರ್ಥಿಕತೆ ಆಗುವತ್ತ ವೇಗವಾಗಿ ಚಲಿಸುತ್ತಿದೆ.ಶೃಂಗಸಭೆಯ ದಿನಾಂಕಗಳನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಆದಿತ್ಯನಾಥ್ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಶೃಂಗಸಭೆಯ ಸಿದ್ಧತೆಯ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಹೇಳಿದ್ದಾರೆ.

    ಯುಕೆ, ಯುಎಸ್ಎ, ಕೆನಡಾ, ಯುಎಇ, ಸ್ವೀಡನ್, ಸಿಂಗಾಪುರ್, ನೆದರ್ಲ್ಯಾಂಡ್ಸ್, ಇಸ್ರೇಲ್, ಫ್ರಾನ್ಸ್, ಜರ್ಮನಿ, ದಕ್ಷಿಣ ಕೊರಿಯಾ, ಮಾರಿಷಸ್, ರಷ್ಯಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ರೋಡ್ ಶೋಗಳ ಮೂಲಕ ಶೃಂಗಸಭೆಯನ್ನು ವ್ಯಾಪಕವಾಗಿ ಪ್ರಚಾರ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

    300x250 AD

    ಕೃಪೆ:https://news13.in/

    Share This
    300x250 AD
    300x250 AD
    300x250 AD
    Leaderboard Ad
    Back to top