ಶಿರಸಿ: ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಜು.15 ಶುಕ್ರವಾರದಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ವತಿಯಿಂದ ಉಚಿತ ನೋಟ್ ಬುಕ್ ಹಾಗೂ ಕ್ರೀಡಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಸಂಸ್ಥಾಪಕ ಉಪೇಂದ್ರ ಪೈ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಿದರು. ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಸಹಕಾರಿಯಾಗುವ ಕ್ರೀಡಾ ಸಾಮಗ್ರಿಗಳನ್ನು ಪ್ರೌಢಶಾಲೆಗೆ ನೀಡಿದರು. ಎಂಟು,ಒಂಭತ್ತು,ಹತ್ತನೇ ವರ್ಗದ ಎಲ್ಲ ವಿದ್ಯಾರ್ಥಿಗಳ ಸರಕಾರಿ ಶುಲ್ಕ ಮೊತ್ತ 15469/- ರೂಪಾಯಿಗಳನ್ನು ದೇಣಿಗೆ ನೀಡಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತಮ್ಮ ಮಹತ್ತರ ಕೊಡುಗೆಯನ್ನು ನೀಡಿದರು.
ನಂತರದಲ್ಲಿ ಮಾತನಾಡಿದ ಪೈ, ನಮ್ಮ ಸಂಸ್ಥೆಯು ಇಲ್ಲಿಯವರೆಗೆ ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯ ಮಾಡುತ್ತಿದೆ ಶಿಕ್ಷಣಕ್ಕೆ ಯಾವುದೇ ಕೊರತೆ ಆಗಬಾರದು. ಹಾಗೆಯೇ ಜೀವನದಲ್ಲಿ ನೀವು ಸಹ ನೀವು ಕಲಿತ ಶಾಲೆಗೆ, ವಿದ್ಯಾರ್ಥಿಗಳಿಗೆ ಸಹಾಯವನ್ನು ಮಾಡಿ ಶಿಕ್ಷಣವನ್ನು ಉತ್ತೇಜಿಸಿ ಎಂದು ಕಿವಿಮಾತು ಹೇಳಿದರು .ಶಾಲೆಯ ಹಳೆಯ ವಿದ್ಯಾರ್ಥಿ ಗಣಪತಿ ಭಟ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ತಮ್ಮ ಹಿತವಚನವನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ಧಿವಿನಾಯಕ ವಿದ್ಯಾಪ್ರಸಾರ ಸಮಿತಿ ಗೋಳಿ ಅಧ್ಯಕ್ಷ ಎಮ್‌ಎಲ್ ಹೆಗಡೆ ಹಲಸಿಗೆ ವಹಿಸಿ ಉಪೇಂದ್ರ ಪೈರವರ ಈ ಮಹತ್ತರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಸಂಸ್ಥೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.ಶಾಲೆಯ ಮುಖ್ಯಾಧ್ಯಾಪಕರಾದ ನಾರಾಯಣ ದೈಮನೆ ಸ್ವಾಗತಿಸಿದರು.ದೈಹಿಕ ಶಿಕ್ಷಣ ಶಿಕ್ಷಕರಾದ ಗಣೇಶ್ ಜಿ ಹೆಗಡೆ ವಂದಿಸಿದರು.ವಿಜ್ಞಾನ ಶಿಕ್ಷಕರಾದ ಆರ್ ಕೆ ಚವ್ಹಾಣ್ ಕಾರ್ಯಕ್ರಮ ನಿರ್ವಹಿಸಿದರು.