• Slide
    Slide
    Slide
    previous arrow
    next arrow
  • ಕೈಗಾ 5 ಮತ್ತು 6 ನೇ ಘಟಕದ ಯೋಜನಾ ನಿರ್ದೇಶಕರಾಗಿ ಬಿ.ಕೆ.ಚೆನ್ನಕೇಶವ ನಿಯುಕ್ತಿ

    300x250 AD

    ಕಾರವಾರ: ತಾಲೂಕಿನ ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6 ನೇ ಘಟಕದ ಯೋಜನಾ ನಿರ್ದೇಶಕರಾಗಿ ಬಿ.ಕೆ.ಚೆನ್ನಕೇಶವ ನಿಯುಕ್ತಿಗೊಂಡಿದ್ದಾರೆ.

    ಕೈಗಾ ಅಣು ವಿದ್ಯುತ್ ಯೋಜನೆಯು ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ವಿದ್ಯುತ್ ಉತ್ಪಾದಿಸುವ ಉದ್ಯಮವಾಗಿದೆ. ಕೈಗಾ ಯೋಜನೆ 5 ಮತ್ತು 6ನೇ ಘಟಕದ 700 ಮೆ.ವ್ಯಾ *2 ಸಾಮರ್ಥ್ಯದ ಅಣುವಿದ್ಯುತ್ ಸ್ಥಾವರವಾಗಿದ್ದು, ಈಗ ನಿರ್ಮಾಣ ಹಂತದಲ್ಲಿದೆ. ಬಿ.ಕೆ.ಚೆನ್ನಕೇಶವ ಸುಮಾರು 30 ವರ್ಷಗಳಿಂದ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್‌ನಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಈಗ ಯೋಜನಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

    300x250 AD

    ಕೈಗಾ ಯೋಜನೆ 1-2 ಮತ್ತು 3-4, ಕಲ್ಪಾಕಂ ಮತ್ತು ಹರಿಯಾಣದ ಯೋಜನೆಗಳಲ್ಲಿ ಕೆಲಸ ಮಾಡಿ ಅಪಾರ ಅನುಭವವನ್ನು ಹೊಂದಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನವರಾಗಿದ್ದು, ಹಿಂದೆ ಎನ್‌ಪಿಸಿಐಎಲ್ ಕೈಗಾ 3 ಮತ್ತು 4 ನಿರ್ಮಾಣ ಕೆಲಸ ಕೇವಲ 59 ತಿಂಗಳಲ್ಲಿ ಮುಗಿಸಿದ ದಾಖಲೆಯಿದ್ದು, ಇದರಲ್ಲಿ ಇವರ ಪಾತ್ರ ಬಹುಮುಖ್ಯವಾಗಿದೆ. ಈಗ ಇವರ ನೇತೃತ್ವದಲ್ಲಿ ಕೈಗಾ 5 ಮತ್ತು 6ನೇ ಘಟಕ ನಿರ್ಮಾಣ ಕೆಲಸವು ನಡೆಯುತ್ತಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top