Slide
Slide
Slide
previous arrow
next arrow

ಕರ್ನಾಟಕ ಸಂಘ ಅಂಕೋಲಾದ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ

300x250 AD

ಅಂಕೋಲಾ: 2022-23ನೇ ಸಾಲಿನ ಕರ್ನಾಟಕ ಸಂಘ ಅಂಕೋಲಾದ ನೂತನ ಪದಾಧಿಕಾರಿಗಳನ್ನು ಎಲ್ಲ ಕಾರ್ಯಕಾರಿ ಮಂಡಳಿಯ ಸದಸ್ಯರು ಮತ್ತು ಸಂಘದ ವಿಶೇಷ ಆಮಂತ್ರಿತರೆಲ್ಲರೂ ಕನ್ನಡ ಭವನದಲ್ಲಿ ಸಭೆ ಸೇರಿ ಒಮ್ಮತದ ಮೂಲಕ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ರಾಜೀವ ಜಿ.ನಾಯಕ ಹಿಚ್ಕಡ ಅಂಕೋಲಾ, ಉಪಾಧ್ಯಕ್ಷರಾಗಿ ಹಿರಿಯ ನಿವೃತ್ತ ಶಿಕ್ಷಕ ಎ.ಎಂ. ಮುಲ್ಲಾ, ಕಾರ್ಯದರ್ಶಿಯಾಗಿ ಅರವಿಂದ ಎಂ. ನಾಯಕ ಬಾಸಗೋಡ, ಸಹಕಾರ್ಯದರ್ಶಿಯಾಗಿ ವಾಸುದೇವ ಜಿ. ನಾಯಕ ಶಿಂಗನಮಕ್ಕಿ, ಖಜಾಂಚಿಯಾಗಿ ನಾರಾಯಣ ಬಿ. ನಾಯಕ ಸೂರ್ವೆ ಆಯ್ಕೆಯಾದರು. ಅಧ್ಯಕ್ಷರಾಗಿ ಆಯ್ಕೆಯಾದ ರಾಜೀವ ನಾಯಕ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಎ.ಎಂ. ಮುಲ್ಲಾ ಎಲ್ಲ ಹಿರಿಯರ ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರ ಅನುಭವ ಮತ್ತು ಮಾರ್ಗದರ್ಶನದಲ್ಲಿ ಸಂಘದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸುತ್ತೇವೆಂದು ತಿಳಿಸಿದರು.

300x250 AD

ಸಂಘದ ವಿಶೇಷ ಆಮಂತ್ರಿತರಾದ ಕಾಳಪ್ಪ ಎನ್. ನಾಯಕ ಅವರು ಮಾತನಾಡಿ, ಹೆಚ್ಚೆಚ್ಚು ಕಾರ್ಯಕ್ರಮವನ್ನು ನಡೆಸಿಕೊಡಬೇಕು. ಮತ್ತು ಸಂಘಕ್ಕೆ ಬೇಕಾದ ಆರ್ಥಿಕ ನೆರವಿಗೆ ತನ್ನ ಸಹಾಯ ಹಸ್ತವಿದೆ ಎಂಬುದನ್ನು ತಿಳಿಸಿದರು. ಪ್ರೊ. ಕೆ.ವಿ. ನಾಯಕ ಮತ್ತು ಇತರ ಹಿರಿಯ ವಿಶೇಷ ಆಮಂತ್ರಿತರು ಮತ್ತು ಕಾರ್ಯಕಾರಿ ಮಂಡಳಿಯ ಸಹಕಾರದೊಂದಿಗೆ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಸಭೆಯ ಅಧ್ಯಕ್ಷತೆಯನ್ನು ಹಿಂದಿನ ಅಧ್ಯಕ್ಷ ಪ್ರಭಾಕರ ಬಂಟ ವಹಿಸಿಕೊಂಡಿದ್ದರು.

Share This
300x250 AD
300x250 AD
300x250 AD
Back to top