Slide
Slide
Slide
previous arrow
next arrow

ಕಡಲಬ್ಬರಕ್ಕೆ ಕೊಚ್ಚಿಹೋದ ಸಿಮೆಂಟ್ ಪೈಪುಗಳು

300x250 AD

ಕಾರವಾರ : ಕಡಲಬ್ಬರಕ್ಕೆ ಟಾಗೋರ್ ಕಡಲತೀರದಲ್ಲಿ ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತಾರ ಕಾಮಗಾರಿಗೆ ತಂದಿಡಲಾಗಿದ್ದ ಬೃಹದಾಕಾರದ ಸಿಮೆಂಟ್ ಪೈಪುಗಳು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು ಸಾಂಪ್ರದಾಯಿಕ ಮೀನುಗಾರರಿಗೂ ಸಂಕಷ್ಟ ತಂದೊಡ್ಡಿದೆ. ಕಳೆದ ಎರಡು ವರ್ಷದ ಹಿಂದೆ ಎರಡನೇ ಹಂತದ ಬಂದರು ಯೋಜನೆ ವಿಸ್ತಾರ ಕಾಮಗಾರಿಗಾಗಿ ಗುತ್ತಿಗೆ ಪಡೆದ ಕಂಪನಿ ಈ ಪೈಪ್‌ಗಳನ್ನು ಟಾಗೋರ ತೀರದಲ್ಲಿ ತಂದಿಡಲಾಗಿತ್ತು. ಆದರೆ ಮೀನುಗಾರರ ವಿರೋಧದ ಹಿನ್ನಲೆಯಲ್ಲಿ ಯೋಜನೆ ಆರಂಭವಾಗದ ಹಿನ್ನಲೆಯಲ್ಲಿ ಪೈಪ್‌ಗಳನ್ನು ಅಲ್ಲಿಯೇ ಬಿಡಲಾಗಿತ್ತು. ಇದೀಗ ಸಮುದ್ರದ ಅಬ್ಬರಕ್ಕೆ ಎರಡು ಪೈಪ್ ಕೊಚ್ಚಿ ಹೋಗಿದೆ. ಇದರಲ್ಲಿ ಒಂದು ಪೈಪ್ ನೀರಿನೊಳಗೆ ಸೇರಿಕೊಂಡಿದ್ದರೆ ಇನ್ನೊಂದು ಪೈಪ್ ದಡದ ಮೇಲಿಂದ ಸಮುದ್ರಕ್ಕೆ ಕೊಚ್ಚಿ ಹೋಗಿದೆ. ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಡಲಕೊರೆತ ಉಂಟಾಗುತ್ತಿದ್ದು ಆತಂಕ ಸೃಷ್ಟಿಸುತ್ತಿದೆ. ಅಲ್ಲದೆ ಇಲ್ಲಿ ಹೆಚ್ಚಿಗಿ ನಾಡ ದೋಣಿ ಮೀನುಗಾರಿಕೆ ನಡೆಸಲಾಗುತ್ತಿದ್ದು ಇದೀಗ ಸಮುದ್ರದಲ್ಲಿ ಕೊಚ್ಚಿ ಹೋಗಿರುವ ಬಾರೀ ಗಾತ್ರದ ಸಿಮೆಂಟ್ ಪೈಪ್ ನೀರಿನಲ್ಲಿ ಸೇರಿಕೊಂಡಿರುವದರಿಂದ ಎಲ್ಲಿ ಇದೆ ಎಂದು ಗುರುತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೀನುಗಾರಿಕೆಯೂ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಂಡು ಮೀನುಗಾರಿಕೆ ನಡೆಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top