ಕಾರವಾರ: ಚೆನೈನಲ್ಲಿ ಜರುಗಿದ 5ನೇ ಯುವ ಪುರುಷ ಮತ್ತು ಮಹಿಳೆಯರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಾರವಾರದ ವೈಷ್ಣವಿ ಸುನೀಲ ಕೊಲ್ವೇಕರ ಕಂಚಿನ ಪದಕ ಪಡೆಯುವ ಮೂಲಕ ಗಮನ ಸೆಳೆದಿದ್ದಾಳೆ.
ಈ ಹಿಂದೆ ಸಹ ಬಾಕ್ಸಿಂಗ್ ನಲ್ಲಿ ಹಲವು ಪ್ರಶಸ್ತಿಗಳನ್ನ ಪಡೆಯುವ ಮೂಲಕ ವೈಷ್ಣವಿ ಕಾರವಾರಕ್ಕೆ ಕೀರ್ತಿ ತಂದಿದ್ದಳು. ಚೆನೈನ ಕಟ್ಟನ್ ಕುಲತೂರಿನಲ್ಲಿ ಜರುಗಿದ ರಾಷ್ಟ್ರೀಯ ಚಾಕ್ಸಿಂಗ್ ನಲ್ಲಿ ಕಂಚಿನ ಪದಕವನ್ನ ಪಡೆದಿದ್ದಾಳೆ.
ನಗರದ ಸುಂಕೇರಿಯ ಮೂರು ದೇವಸ್ಥಾನ ಬಳಿಯ ಗಿರಿಜಾಬಾಯಿ ಮಹಾದೇವ ಕೊಲ್ವೇಕರ ಮೊಮ್ಮಗಳಾಗಿರುವ ವೈಷ್ಣವಿ ಸಾಧನೆಗೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅಭಿಮಾನಿ ಸಂಘ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.