Slide
Slide
Slide
previous arrow
next arrow

ಜು.19ಕ್ಕೆ ಮರಾಠ ಅಭಿವೃದ್ಧಿ ನಿಗಮ ಪ್ರಾರಂಭೋತ್ಸವ

300x250 AD

ಶಿರಸಿಃ ಕ್ಷತ್ರಿಯ ಮರಾಠಾ ಸಮುದಾಯ ಹಾಗೂ ಸಮುದಾಯದ ಉಪ ಪಂಗಡಗಳಾದ ಕೊಂಕಣ ಮರಾಠಾ, ಆರ್ಯ ಮರಾಠಾ, ಮುಂತಾದ ಜನಾಂಗಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರವು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ರಚಿಸಿರುವುದಕ್ಕೆ ಜಿಲ್ಲೆಯ ಕ್ಷತ್ರೀಯ ಮರಾಠ ಸಮುದಾಯದವರಿಗೆ ಹಾಗೂ ಸಮುದಾಯದ ಉಪಪಂಗಡದವರಿಗೆ ತೀವ್ರ ಹರ್ಷ ಉಂಟಾಗಿದೆ ಎಂದು ಜಿಲ್ಲೆಯ ಮರಾಠ ಸಮುದಾಯದ ಮುಖಂಡ ಪಾಂಡುರಂಗ ವಿ. ಪಾಟೀಲ ತಿಳಿಸಿದ್ದಾರೆ.

ಅವರು ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ನೀಡಿ ಕಳೆದ 25 ರಿಂದ 30 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಇಲ್ಲಿಯವರೆಗೂ ಆದಂತಹ ಯಾವುದೇ ಸರಕಾರಗಳು ಮರಾಠ ಅಭಿವೃದ್ಧಿ ನಿಗಮವನ್ನು ರಚನೆ ಮಾಡಿರಲಿಲ್ಲ. ಆದರೆ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಪುಟದ ಸಚಿವರುಗಳು ಈ ಬಗ್ಗೆ ಗಮನ ಹರಿಸಿ ಮರಾಠ ಅಭಿವೃದ್ಧಿ ನಿಗಮವನ್ನು ರಚನೆ ಮಾಡಿದ್ದಾರೆ. ಇದರ ಪ್ರಾರಂಭೋತ್ಸವ ಸಮಾರಂಭವು ಜುಲೈ 19 ರಂದು ಬೆಳಿಗ್ಗೆ 11 ಘಂಟೆಗೆ ಬೆಂಗಳೂರಿನ ಅರಮನೆ ಮೈದಾನ ತ್ರಿಪುರವಾಸಿನಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲು ಇದ್ದಾರೆ. ಈ ಸಮಾವೇಶಕ್ಕೆ ಜಿಲ್ಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಕ್ಷತ್ರೀಯ ಮರಾಠಾ ಸಮುದಾಯ ಹಾಗೂ ಆ ಸಮುದಾಯದ ಉಪ ಪಂಗಡಗಳಾದ ಕೊಂಕಣ ಮರಾಠಾ, ಆರ್ಯ ಮರಾಠಾ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿ, ಇದರಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕ್ಷತ್ರೀಯ ಮರಾಠಾ ಸಮುದಾಯ ಹಾಗೂ ಆ ಸಮುದಾಯದ ಉಪ ಪಂಗಡಗಳಾದ ಕೊಂಕಣ ಮರಾಠಾ, ಆರ್ಯ ಮರಾಠಾ ಪಾಲ್ಗೊಳ್ಳಬೇಕೆಂದು ತಿಳಿಸಿದ್ದಾರೆ.

300x250 AD

ಸಿ.ಎಂ.ತವರು ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿ :- ಉತ್ತರ ಕನ್ನಡ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವ ವಿಧಾನಸಭಾ ಕ್ಷೇತ್ರವಾದ ಶಿಗ್ಗಾವಿ ಸವಣೂರು ಕ್ಷೇತ್ರದಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಠ ಸಮುದಾಯದವರು ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದು ಜಿಲ್ಲೆಯ ಮರಾಠ ಸಮುದಾಯದ ಮುಖಂಡ ಪಾಂಡುರಂಗ ವಿ. ಪಾಟೀಲ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top