• Slide
    Slide
    Slide
    previous arrow
    next arrow
  • ಪವನಕುಮಾರ ಹೆಗಡೆ ಸಿ.ಎ.ತೇರ್ಗಡೆ

    300x250 AD

    ಸಿದ್ದಾಪುರ : ತಾಲೂಕಿನ ನಿಲ್ಕುಂದ-ದೇವಿಮನೆಯ ಪವನಕುಮಾರ ಗೋಪಾಲಕೃಷ್ಣ ಹೆಗಡೆ ಕಳೆದ ಮೇ ತಿಂಗಳಿನಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾನೆ. ಇವನು ನಿಲ್ಕುಂದ-ದೇವಿಮನೆಯ ಗೋಪಾಲಕೃಷ್ಣ ಹೆಗಡೆ ಮತ್ತು ಸುಮಿತ್ರಾ ಅವರ ಪುತ್ರನಾಗಿದ್ದು ತಮ್ಮ ಪ್ರಾಥಮಿಕ ಶಾಲೆಯನ್ನು ಕಿ.ಪ್ರಾ.ಶಾಲೆ ಬಾಳೇಕೊಪ್ಪ ಹಾಗೂ ನಿಲ್ಕುಂದ. ಪ್ರೌಢಶಿಕ್ಷಣವನ್ನು ಶಿರಗುಣಿ ಪ್ರೌಢಶಾಲೆಯಲ್ಲಿ ಪಡೆದು ಪಿಯುಸಿ ಮತ್ತು ಶಿರಸಿಯ ಎಂಇಎಸ್ ಕಾಲೇಜಿನಲ್ಲಿ ಪೂರೈಸಿದ್ದಾನೆ. ಗೋವಾದ ಆರ್.ಕೆ.ಪಿಕಳೆ & ಕೋ ಕಂಪನಿಯ ಮಾರ್ಗದರ್ಶನದಲ್ಲಿ ಆರ್ಟಿಕಲ್‌ಶಿಪ್ ಮುಗಿಸಿದ್ದನು. ನಿರಂತರ ಅಧ್ಯಯನಶೀಲತೆ ಹಾಗೂ ಹಿರಿಯರ ಮಾರ್ಗದರ್ಶನ ಈ ಸಾಧನೆಗೆ ಕಾರಣ ಎಂದು ಹರ್ಷ ವ್ಯಕ್ತಪಡಿಸಿದ್ದಾನೆ. ಇವನ ಸಾಧನೆ ನಿರಂತರವಾಗಿರಲಿ, ಮುಂದಿನ ಜೀವನ ಶುಭದಾಯಕವಾಗಲಿ ಎಂದು ಪಾಲಕರು,ಊರ ಹಿರಿಯರು ಹಾರೈಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top