Slide
Slide
Slide
previous arrow
next arrow

ಗೃಹ ರಕ್ಷಕ ಘಟಕದ ವತಿಯಿಂದ ಉಚಿತ ಪಠ್ಯಪುಸ್ತಕ ವಿತರಣೆ

300x250 AD

ಹಳಿಯಾಳ: ಪಟ್ಟಣದ ಗೃಹ ರಕ್ಷಕ ಘಟಕದ ವತಿಯಿಂದ ಶುಕ್ರವಾರ ತಾಲೂಕಿನ ತಿಮ್ಮಾಪೂರ ಗ್ರಾಮದ ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗೃಹ ರಕ್ಷಕ ಸಿಬ್ಬಂದಿಗಳು ನಮ್ಮ ಸೇವೆ ನಿರಂತರ ಹಾಗೂ ವಿದ್ಯಾಭ್ಯಾಸದ ಅಡಿಯಲ್ಲಿ ಕಲಿಯುವ ಮಕ್ಕಳಿಗೆ ನಮ್ಮ ಘಟಕದಿಂದ ಕೈಲಾದಷ್ಟು ಸಹಾಯ ಮಾಡುವ ಮನೋಭಾವ ಬೆಳೆಸಿಕೊಂಡು ಬಂದಿದೆ. ನಮ್ಮ ಕಾಯಕದ ಜೊತೆಗೆ ನಿಸ್ವಾರ್ಥ ಸೇವೆ ಮಾಡಲು ಸದಾ ಸಿದ್ದರಾಗಿದ್ದೆವೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊAಡರು.

300x250 AD

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಐ.ಸಿ ಘಟಕಾಂಬ್ಳೆ, ಪ್ರಭಾರಿ ಘಟಕಾಧಿಕಾರಿ ಡಿ.ಬಿ. ಕಾಂಬ್ಳೆ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ರಮೇಶ ದೇವಕರಿ, ಗ್ರಾ.ಪಂ ಸದಸ್ಯರಾದ ರಾಮಚಂದ್ರ ಮೋರಿ, ಮುಖ್ಯ ಶಿಕ್ಷಕರಾದ ನವೋಲಿನ್ ಪೇಚೆಕೋ, ಅತಿಥಿ ಶಿಕ್ಷಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಹಾಗೂ ಗ್ರಹ ರಕ್ಷಕದಳದ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top