• Slide
    Slide
    Slide
    previous arrow
    next arrow
  • ಅಂಚೆ-ಕುಂಚ ಚಿತ್ರ ಸ್ವರ್ಧೆಯಲ್ಲಿ ಅಖಿಲೇಶ್ ಪ್ರಥಮ

    300x250 AD

    ಕಾರವಾರ: ಶ್ರೀ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಯೋಜನೆ ಅಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಅವರು ಆಯೋಜಿಸಿದ್ದ 19ನೇ ರಾಜ್ಯಮಟ್ಟದ ಅಂಚೆ-ಕುಂಚ ಚಿತ್ರ ಸ್ವರ್ಧೆಯಲ್ಲಿ ಕಾರವಾರ ನಗರದ ಅಖಿಲೇಶ್ ನಾಗೇಶ್ ನಾಯ್ಕ ಅವರು ಕಾಲೇಜು ವಿಭಾಗದ ‘ಕುಡಿತದ ಕೆಡಕು’ ವಿಷಯದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿ ವೀರೇಂದ್ರ ಹೆಗ್ಗಡೆಯವರು ಪ್ರಶಸ್ತಿ ಪ್ರದಾನ ಮಾಡಿದರು.

    ಅಖಿಲೇಶ್ ನಾಯ್ಕ ಸಣ್ಣ ವಯಸ್ಸಿನಿಂದಲೇ ಅನೇಕ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ತಾಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ. ಅಲ್ಲದೇ ಅಖಿಲೇಶ್ ಬಿಡಿಸುವ ಚಿತ್ರಗಳಲ್ಲಿ ಸಮಾಜದ ವಾಸ್ತವಕತೆ ಹಾಗೂ ಸಮಾಜಕ್ಕೆ ಅರಿವು ಮೂಡಿಸುವ ಅಂಶಗಳನ್ನು ತಮ್ಮ ಕೈಚಳಕದ ಮೂಲಕ ಜನರ ಗಮನವನ್ನು ಸೆಳೆದಿರುವುದನ್ನ ನೋಡಿರಬಹುದಾಗಿದ್ದು ಇದಲ್ಲದೇ ಜೇಡಿ ಮಣ್ಣಿನ ಗಣಪತಿ ಮೂರ್ತಿ ತಯಾರಿಸುವಲ್ಲಿ ಪರಿಣಿತಿ ಹೊಂದಿದ್ದಾರೆ.ಅದೇ ರೀತಿ ಗೋಡೆ ಬರಹದಲ್ಲಿ ಸಹ ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top