• first
    second
    third
    previous arrow
    next arrow
  • ಗೋಳಿ ಪ್ರೌಢಶಾಲೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿ ಸಂಸತ್ ಚುನಾವಣೆ

    300x250 AD

    ಶಿರಸಿ; ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯ 2022-23ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ಜು.೧೪,ಗುರುವಾರ ನಡೆಯಿತು.

    ವಿದ್ಯಾರ್ಥಿಗಳ ವಿಭಾಗದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ವಿಕಾಸ ಈಶ್ವರ್ ನಾಯ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಕಿರಣ ಪುರುಷೋತ್ತಮ ಗೌಡ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಂಜುನಾಥ ಮಡಿವಾಳ, ಆರೋಗ್ಯ ಮತ್ತು ಸ್ವಚ್ಚತೆ ಕಾರ್ಯದರ್ಶಿಯಾಗಿ ಗಜಾನನ ಕೃಷ್ಣ ಮಡಿವಾಳ ವಿದ್ಯಾರ್ಥಿನಿಯರ ವಿಭಾಗದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಅನ್ವಿತಾ ಮಹೇಶ್ ಭಟ್ಟ, ಕ್ರೀಡಾ ಕಾರ್ಯದರ್ಶಿಯಾಗಿ ತೇಜಸ್ವಿನಿ ಚಂದ್ರಶೇಖರ ಮಡಿವಾಳ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಾನ್ಯ ವಿದ್ಯಾಧರ ಮಡಿವಾಳ, ಆರೋಗ್ಯ ಮತ್ತು ಸ್ವಚ್ಚತೆ ಕಾರ್ಯದರ್ಶಿಯಾಗಿ ಮೇಘನಾ ಅನಂತ ನಾಯ್ಕ ಚುನಾಯಿತರಾದರು. ಚುನಾವಣೆಯಲ್ಲಿ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಮೊಬೈಲ್‌ ಅಪ್ಲಿಕೇಶನ್ ಬಳಸಿ ಮತದಾನ ಪ್ರಕ್ರಿಯೆಯನ್ನು ಕೈಗೊಳ್ಳಲಾಯಿತು.ಯಾವುದೇ ಪೇಪರ್ ವ್ಯಯ ಮಾಡದೇ ಚುನಾವಣೆ ಸಂಘಟಿಸಿರುವುದು ವಿಶೇಷ.ಚುನಾವಣೆ ಪ್ರಕ್ರಿಯೆಯಲ್ಲಿ ಮುಖ್ಯಾಧ್ಯಾಪಕರಾದ ನಾರಾಯಣ ದೈಮನೆ ಚುನಾವಣೆ ಪ್ರಕ್ರಿಯೆ ಹಾಗೂ ಅದರ ಅಗತ್ಯತೆ ಕುರಿತು ಮಾಹಿತಿ ನೀಡಿದರು.ಎಲ್ಲ ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳು ಚುನಾವಣೆ ಪ್ರಕ್ರಿಯೆಗೆ ಸಹಕರಿಸಿದರು.

    300x250 AD
    Share This
    300x250 AD
    300x250 AD
    300x250 AD
    Back to top