Slide
Slide
Slide
previous arrow
next arrow

ಪರಮಾತ್ಮನ ಸಾನ್ನಿಧ್ಯಕ್ಕೆ ವೈರಾಗ್ಯ, ಜ್ಞಾನ ಎರಡೂ ಅವಶ್ಯ: ಸ್ವರ್ಣವಲ್ಲೀ ಶ್ರೀ

300x250 AD

ಶಿರಸಿ: ನಮ್ಮ ಧರ್ಮದಲ್ಲಿ ಎರಡು ಮೌಲ್ಯಗಳಿಗೆ ಅತ್ಯಂತ ಗೌರವದ ಸ್ಥಾನವಿದೆ. ಒಂದು ವೈರಾಗ್ಯ, ಇನ್ನೊಂದು ಜ್ಞಾನ ಎಂದು ಸೋಂದಾ ಸ್ವರ್ಣವಲ್ಲೀ  ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾಸಮಸ್ವಾಮೀಜಿಗಳು ನುಡಿದರು‌.

 ವೈರಾಗ್ಯ, ಜ್ಞಾನವನ್ನು ವ್ಯಾಸ ಪೂರ್ಣಿಮೆ ಇಂಥವನ್ನು ನೆನಪು ಮಾಡಿಕೊಳ್ಳಲು ಅವಕಾಶ ಆಗುತ್ತದೆ. ಪರಮಾತ್ಮನ ಸಾನ್ನಿಧ್ಯಕ್ಕೆ ವೈರಾಗ್ಯ, ಜ್ಞಾನ ಬೇಕು. ಈ ಎರಡೂ ಇರುವದು ಕೆಲವೇ ಕೆಲವರಲ್ಲಿ ಇದೆ. ಅವರಲ್ಲಿ ವೇದವ್ಯಾಸರು, ಶಂಕರರು ಎಂದರು.ಪ್ರಾಪಂಚಿಕ ಆಕರ್ಷಣೆ ಕೆಳಕ್ಕೆ ತಳ್ಳಿ ಮೇಲಕ್ಕೆ ಏರುವುದೇ ವೈರಾಗ್ಯ. ನಿಂತಲ್ಲಿಂದ ಮೇಲಕ್ಕೆ ಹತ್ತಲು  ನೆಲವನ್ನು‌ ಒತ್ತಿ ಮೇಲಕ್ಕೆ ಹತ್ತುತ್ತೇವೆ. ಕೆಳಗಿನ ವಸ್ತು ಒತ್ತಿ ಮೇಲಕ್ಕೆ ಹೋಗುವುದೇ ವೈರಾಗ್ಯ. ಲೌಕಿಕ ವಸ್ತು, ಆಕರ್ಷಣೆ ತಳ್ಳಿ ಮೇಲಕ್ಕೆ ಹೋಗಲು ವೈರಾಗ್ಯ ಬೇಕು ಎಂದರು.ಮೇಲಕ್ಕೆ ಹಿಡಿದು ಮೇಲಕ್ಕೆ ಏರಬೇಕು.ಅದುವೇ ಭಕ್ತಿ ಮಾರ್ಗ. ಇದಕ್ಕೆ ಉದಾಹರಣೆ ಬುದ್ಧ ಎಂದು ವಿವರಿಸಿ‌ ಮಾತನಾಡಿದರು.

ರಾಜ್ಯ ಶಿಕ್ಷಣ‌ ಸಚಿವ ಬಿ.ಸಿ.ನಾಗೇಶ,  ಶಿಕ್ಷಣದಲ್ಲಿ ನೈತಿಕ ಶಿಕ್ಷಣ ಆರಂಭಿಸಬೇಕು ಎಂಬ ಚಿಂತನೆ ಆರಂಭವಾಗಿದೆ. ಈ ಪಠ್ಯದಲ್ಲಿ ಅದರಲ್ಲಿ ಭಗವದ್ಗೀತೆ ಕೂಡ ಸೇರಲಿದೆ ಎಂದ ಅವರು, ಪಠ್ಯ ಸಿದ್ದವಾದ ಬಳಿಕ ಎಲ್ಲ ಶ್ರೀಗಳ ಗಮನಕ್ಕೂ ತಂದು ಅನುಷ್ಠಾನಕ್ಕೆ ತರಲಾಗುತ್ತದೆ. ಮಾತೃಭಾಷಾ ಶಿಕ್ಷಣಕ್ಕೂ ಸಂಸ್ಕೃತಕ್ಕೂ ಆಧ್ಯತೆ‌ ಸಿಗಲಿದೆ ಎಂದರು.

ಸ್ವರ್ಣವಲ್ಲೀ ಶ್ರೀಗಳು ಪ್ರೇರಣಾ‌ ಶಕ್ತಿ. ಪರಿಸರ, ಸಂಸ್ಕೃತ, ಭಗವದ್ಗೀತೆ, ವ್ಯಸನ‌ಮುಕ್ತ ಸಮಾಜ ನಿರ್ಮಾಣ ಯಾವುದಿದ್ದರೂ ನಾಡಿಗೇ ಮಾದರಿಯ ಕಾರ್ಯ. ಈ ಕಾರ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಸಮರ್ಪಿಸಿಕೊಂಡಿದ್ದಾರೆ  ಸಮಾಜಮುಖಿ ಅರ್ಪಿಸಿಕೊಂಡವರನ್ನೂ ನಮಗೆ ಪರಿಚಯಿಸಿದ್ದಾರೆ. ಸಂಸ್ಕೃತ ಕುರಿತು ಸರಕಾರದ ನಿಲುವಿನಲ್ಲಿ ಮುಂದಿನ ಜನಾಂಗಕ್ಕೆ ಸಿಗದೇ ಇರುವ ಆತಂಕ ಕೂಡ ಶ್ರೀಗಳಲ್ಲೂ ಇದೆ ಎಂದರು.

ಮಠದ ಅಧ್ಯಕ್ಷ‌ ವಿ.ಎನ್.ಹೆಗಡೆ‌ ಬೊಮ್ಮನಳ್ಳಿ ಸ್ವಾಗತಿಸಿದರು.ಉಮಾಪತಿ ಭಟ್ಟ ಮತ್ತೀಗಾರ, ರಾಮಕೃಷ್ಣ ಶೇರುಗಾರ ಫಲ ಸಮರ್ಪಿಸಿದರು‌. ವಿ.ಶಂಕರ ಭಟ್ಟ ಉಂಚಳ್ಳಿ, ವಿ.ಉದಯ ವೈದ್ಯ ಸಂಮಾನ ಪತ್ರ ವಾಚಿಸಿಸಿದರು. ಕೆ.ವಿ.ಭಟ್ಟ ಅವರು ಗ್ರಂಥ ಪರಿಚಯ ಮಾಡಿದರು. ಜಿ.ವಿ.ಹೆಗಡೆ ಗೊಡ್ವೆಮನೆ ವಂದಿಸಿದರು. ಆರ್.ಎನ್. ಭಟ್ಟ ಸುಗಾವಿ ನಿರ್ವಹಿಸಿದರು. ಇದೇ ವೇಳೆ ಮಠದ ನವೀಕೃತ ಜಾಲತಾಣವನ್ನು ಸಚಿವರು ಲೋಕಾರ್ಪಣೆಗೊಳಿಸಿದರು. 

300x250 AD

ನಾಡೋಜ ಡಾ. ಕೃಷ್ಣಪ್ರಸಾದ ಕೂಡ್ಲ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಶಂಭುಲಿಂಗ ಹೆಗಡೆ ನಿಡಗೋಡ ಅವರನ್ನು ಗೌರವಿಸಲಾಯಿತು. ಭಗವತ್ಪಾದ ಪ್ರಕಾಶನದಿಂದ ಸೂರ್ಯನಾರಾಯಣ ಭಟ್ಟ ಅವರು ಬರೆದ ಗಣೇಶ ಮಾನಸಾ‌ ಪೂಜಾ, ಮಹಾಬಲೇಶ್ವರ ಭಟ್ಟ ಬಾಸಲರ ಸತ್ಯ ವಿನಾಯಕ ವೃತ, ಎಂ.ಅರ್ ನಾಗರಾಜರ ಅದ್ವೈತ ನಿಷ್ಟೆ, ಅನುಷ್ಠಾನ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ಸ್ವರ್ಣವಲ್ಲೀ ಶ್ರೀಗಳ ಅನುಷ್ಠಾನ ದೊಡ್ಡದು. ಮಧ್ಯಾಹ್ನ ವಿಶ್ರಾಂತಿ ಕೂಡ ತೆಗೆದುಕೊಳ್ಳದೇ ಶಿಷ್ಯರ ಪರವಾಗಿ‌ ಮಿಡಿಯುವ ಶ್ರೀಗಳು. ಶ್ರೀಗಳ ಜನ್ಮ ನಕ್ಷತ್ರದಂದು ಸ್ವರ್ಣವಲ್ಲೀಯಲ್ಲಿ ಉಚಿತ ಸಂಪೂರ್ಣ ನೇತ್ರ ತಪಾಸಣೆ ನಡೆಸಲಾಗುತ್ತದೆ.-ಡಾ. ಕೃಷ್ಣಪ್ರಸಾದ ಕೂಡ್ಲ, ನಾಡೋಜ

ಸ್ವರ್ಣವಲ್ಲೀ ಶ್ರೀಗಳು ನಾಡಿಗೇ ಮಾದರಿಯ ಕಾರ್ಯ ಮಾಡುತ್ತಿದ್ದಾರೆ. ಅವರ ಸಮಾಜಮುಖಿ ಕಾರ್ಯ ದೊಡ್ಡದು.–ಬಿ.ಸಿ.ನಾಗೇಶ, ಶಿಕ್ಷಣ ಸಚಿವ

Share This
300x250 AD
300x250 AD
300x250 AD
Back to top