Slide
Slide
Slide
previous arrow
next arrow

ಉಚಿತ ಸೇವೆಗಾಗಿ ಅಂಬ್ಯುಲೆನ್ಸ್ ಕೊಡುಗೆ:ಮಹಾದೇವ್ ಕಾರ್ಯಕ್ಕೆ ಶ್ಲಾಘನೆಯ ಮಹಾಪೂರ

300x250 AD

ಕಾರವಾರ: ಅಂಬ್ಯುಲೆನ್ಸ್ ಚಾಲಕ ಮಹಾದೇವ ಗಂಗಾಧರ ಕೊಳಂಬಕರ್ ಅವರು ನಗರಸಭೆ ವ್ಯಾಪ್ತಿಯಲ್ಲಿ ಉಚಿತ ಸೇವೆಗಾಗಿ ಕರಾವಳಿ ನವನಿರ್ಮಾಣ ಸೇನೆಗೆ (ಕೆಎನ್‌ಎಸ್) ನೂತನ ಅಂಬ್ಯುಲೆನ್ಸ್ ಅನ್ನು ಕೊಡುಗೆಯಾಗಿ ನೀಡಿದ್ದು, ನಗರದ ಜನತೆಗೆ ಸದಾ ಈ ಕೆಎನ್‌ಎಸ್ ಅಂಬ್ಯುಲೆನ್ಸ್ ಇನ್ನುಮುಂದೆ ಲಭ್ಯವಿರಲಿದೆ.

ಮಹಾದೇವ ಕೊಳಂಬಕರ್ ಅವರು ಅನೇಕ ವರ್ಷಗಳಿಂದ ಅಂಬ್ಯುಲೆನ್ಸ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ತಾವು ಕಷ್ಟಪಟ್ಟು ಹಗಲಿರುಳು ಚಾಲಕ ವೃತ್ತಿಯಿಂದ ದುಡಿದ ಹಣದಲ್ಲೇ ಮಿನಿ ಅಂಬ್ಯುಲೆನ್ಸ್ ಖರೀದಿಸಿದ್ದಾರೆ. ತಮ್ಮ ಪುತ್ರನೂ ಕೂಡ ಸದಸ್ಯನಾಗಿರುವ, ಕಳೆದ ಒಂದೂವರೆ ವರ್ಷಗಳಿಂದ ನಗರದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಕರಾವಳಿ ನವನಿರ್ಮಾಣ ಸೇನೆಗೆ ಅವರು ಈ ಅಂಬ್ಯುಲೆನ್ಸ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ. ನಗರಸಭೆ ವ್ಯಾಪ್ತಿಯ ವಾರ್ಡ್ ಗಳಲ್ಲಿ ಅಗತ್ಯವಿದ್ದವರು ಈ ಅಂಬ್ಯುಲೆನ್ಸ್ ನ ಪ್ರಯೋಜನವನ್ನು ಪಡೆಯಬಹುದಾಗಿದೆ.

ಷರತ್ತುಗಳು: ಕಾರವಾರ ನಗರ ವ್ಯಾಪ್ತಿಯ 60 ವರ್ಷ ಮೇಲ್ಪಟ್ಟವರು, ಅಂಗವಿಕಲರು, ಗರ್ಭಿಣಿಯರಿಗೆ, ಅನಾಥರಿಗೆ, ಶಾಲಾ- ಕಾಲೇಜುಗಳಲ್ಲಿ ಅನಾಹುತಕ್ಕೊಳಗಾದ ವ್ಯಕ್ತಿಗಳು ಉಚಿತವಾಗಿ ಈ ಅಂಬ್ಯುಲೆನ್ಸ್ ನ ಪ್ರಯೋಜನ ಪಡೆಯಬಹುದಾಗಿದೆ. ನಗರದಿಂದ ಹೊರ ಭಾಗಕ್ಕೆ ತೆರಳುವವರು ಕೈಗೆಟಕುವ ದರದಲ್ಲಿ ಈ ಅಂಬ್ಯುಲೆನ್ಸ್ ನ ಸೇವೆ ಪಡೆಯಬಹುದಾಗಿದೆ.

ಅಂಬ್ಯುಲೆನ್ಸ್ ಹಸ್ತಾಂತರ; ಮಹಾದೇವರ ಕಾರ್ಯಕ್ಕೆ ಶ್ಲಾಘನೆಯ ಮಹಾಪೂರ

ಕಾರವಾರ ನಗರಸಭೆಯ ಆವರಣದಲ್ಲಿ ಮಂಗಳವಾರ ನಡೆದ ಸರಳ ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷ ಡಾ.ನಿತಿನ್ ಪಿಕಳೆ ಅವರು ಕೆಎನ್‌ಎಸ್ ಅಂಬ್ಯುಲೆನ್ಸ್ ನ ಕೀಯನ್ನು ಮಹಾದೇವ ಕೊಳಂಬಕರ್ ಅವರ ಮೂಲಕವೇ ಕರಾವಳಿ ನವನಿರ್ಮಾಣ ಸೇನೆಯ ಪದಾಧಿಕಾರಿಳಿಗೆ ಹಸ್ತಾಂತರಿಸಿದರು.

ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ ಬಳಿಕ ಡಾ.ನಿತಿನ್ ಪಿಕಳೆಯವರು ಅಂಬ್ಯುಲೆನ್ಸ್ ಅನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ನಂತರ ಮಹಾದೇವ ಕೊಳಂಬಕರ್ ಅವರೇ ಮೊದಲಿಗೆ ಚಲಾಯಿಸಿ ಅಂಬ್ಯುಲೆನ್ಸ್ ಅನ್ನು ಸೇವೆಗೆ ನೀಡಿದರು.

300x250 AD

ಅಂಬ್ಯುಲೆನ್ಸ್ ಉದ್ಘಾಟಿಸಿ ಮಾತನಾಡಿದ ಡಾ.ಪಿಕಳೆ, ಮಹಾದೇವ ಕೊಳಂಬಕರ್ ಅವರ ನಿಸ್ವಾರ್ಥ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದರು. ಅಲ್ಲದೇ ಹೆಚ್ಚೆಚ್ಚು ಮಹಾದೇವರಂಥ ದಾನಿಗಳು, ಸಾಮಾಜಿಕ ಕಾರ್ಯಕರ್ತರು ನಗರದ ಅಭಿವೃದ್ಧಿಗೆ ಹಾಗೂ ಸಾರ್ವಜನಿಕರಿಗೆ ನೆರವಾಗಲು ಕೋರಿದರು. ಪೌರಾಯುಕ್ತ ಆರ್.ಪಿ.ನಾಯ್ಕ, ನಗರಸಭೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯವಿಲ್ಲ. ನಗರದ ಜನತೆಯೂ ಕೈಜೋಡಿಸಿದರೆ ಮಾತ್ರ ಅಭಿವೃದ್ಧಿ ಕಾರ್ಯಗಳು ಹೆಚ್ಚೆಚ್ಚು ನಡೆಯಲು ಸಾಧ್ಯ. ನಗರದ ಅಭಿವೃದ್ಧಿಗೆ ಮಹಾದೇವರಂಥವರ ಕೊಡುಗೆಗಳೂ ಕಾರಣ ಎಂದರು.

ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತರಕರ್ ಮಾತನಾಡಿ, ಸ್ಥಳೀಯ ಜನರಿಗೆ ಈ ಅಂಬ್ಯುಲೆನ್ಸ್ನಿAದ ಬಗಳ ಅನುಕೂಲವಾಗಲಿದೆ. ಅಶಕ್ತ ರೋಗಿಗಳನ್ನ ಆಸ್ಪತ್ರೆಗಳಿಂದ ಮನೆಗೆ ಬಿಡಲು ಕೂಡ ಬಳಕೆಯಾಗಲಿದೆ. ಎಷ್ಟೇ ಅಂಬ್ಯುಲೆನ್ಸ್ ಇದ್ದರೂ ಕಡಿಮೆಯೇ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ದಾನಿಯೂ ಮಹಾದೇವರಂತೆ ಒಂದೊAದು ಅಂಬ್ಯುಲೆನ್ಸ್ ನೀಡುವಂತಾಗಲಿ ಎಂದು ಆಶಿಸಿದರು. ನಮ್ಮ ಆಸ್ಪತ್ರೆಯಿಂದ ಈಗ ಬೇರೆ ಕಡೆಗಳಿಗೆ ರೋಗಿಗಳನ್ನು ರೆಫರಲ್ ಮಾಡುವುದು ತೀರಾ ಕಡಿಮೆಯಾಗಿದೆ; ಅಷ್ಟು ಉತ್ತಮ ಸೇವೆಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಸಿಗುತ್ತಿದೆ. ಆದರೆ ಸಾವು- ಬದುಕು ನಮ್ಮ ಕೈಯಲ್ಲಿಲ್ಲ ಎನ್ನುವುದನ್ನು ಕೂಡ ಸಾರ್ವಜನಿಕರು ಅರ್ಥ ಮಾಡಿಕೊಂಡಿರಬೇಕು. ಸಾಮಾಜಿಕ ಕಾರ್ಯಕರ್ತರು ಉತ್ತಮ ಕಾರ್ಯಗಳನ್ನ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಯಾರೂ ಮುಂದೆ ಬರಲು ಹಿಂಜರಿಯುವಾಗ ಮಹಾದೇವ ಅವರು ತಮ್ಮ ಬಗ್ಗೆ ಯೋಚಿಸದೇ ಮೃತದೇಹಗಳನ್ನು ಕೊಂಡೊಯ್ದಿದ್ದಾರೆ ಎಂದು ಶ್ಲಾಘಿಸಿದರು.

ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಮಾತನಾಡಿ, ಮಹಾದೇವರ ಅವರು ಮಾದರಿ ಕಾರ್ಯ ಮಾಡಿದ್ದಾರೆ. ಪ್ರಚಾರಕ್ಕೆ, ಲಾಭಕ್ಕಾಗಿ ಅಂಬ್ಯುಲೆನ್ಸ್ ಗಳನ್ನು ನೀಡುವವರ ನಡುವೆಯೂ ಮಧ್ಯಮ ವರ್ಗದ ಒಬ್ಬ ವ್ಯಕ್ತಿ ಸಮಾಜಕ್ಕೆ ಈ ರೀತಿಯ ಕೊಡುಗೆ ನೀಡುತ್ತಿದ್ದಾರೆಂದರೆ ಇದು ಎಲ್ಲರಿಗೂ ಮಾದರಿ. ಹಣ ಗಳಿಸಿ, ಆಸ್ತಿ ಮಾಡಿಟ್ಟರೂ ಏನೂ ಪ್ರಯೋಜವಿಲ್ಲ ಎನ್ನುವುದನ್ನ ಕೊರೋನಾದಿಂದಾಗಿ ನಾವೆಲ್ಲ ನೋಡಿದ್ದೇವೆ. ಕೊರೊನಾ ಸಂದರ್ಭದಲ್ಲಿ , ಮತ್ತು ಅನೇಕ ಸಂದರ್ಭಗಳಲ್ಲಿ ಕೊಳೆತ ಶವಗಳನ್ನೂ ಸಾಗಿಸುವಲ್ಲಿ ಮಾಹಾದೇವರ ಕೊಡುಗೆ ಅಪಾರ ಎಂದರು. ಕಾರವಾರದಲ್ಲಿ ಅನೇಕ ದಾನಿಗಳು, ಸಾಮಾಜಿಕ ಕಾರ್ಯಕರ್ತರಿದ್ದಾರೆ. ಒಬ್ಬರ ಬಳಿ ಆಗದಿದ್ದರೂ ಹೆಚ್ಚು ಜನ ಸೇರಿ ಇಂಥ ಸಾಮಾಜಿಕ ಕಾರ್ಯಗಳನ್ನು ಮಾಡಲು ಮುಂದಾಗಬೇಕಿದೆ. ಅಭಿವೃದ್ಧಿ ದೃಷ್ಟಿಯಲ್ಲಿ ಚಿಂತನೆಗಳನ್ನ ಮಾಡಬೇಕಿದೆ. ಕೇವಲ ಕೊಂಕುಗಳನ್ನು ಹುಡುಕುವಲ್ಲಿ ನಿರತರಾಗಬಾರದು ಎಂದರು.

ದಾನಿ ನರೇಂದ್ರ ದೇಸಾಯಿ, ಈ ಅಂಬ್ಯುಲೆನ್ಸ್ ನಮ್ಮ ನಗರಕ್ಕೆ ದೊಡ್ಡ ಕೊಡುಗೆ. ಎಲ್ಲಾ ದಾನಿಗಳು ನಗರಸಭೆಯ ಜೊತೆಗೆ ಕೈಜೋಡಿಸಿದರೆ ಅಭಿವೃದ್ಧಿ ಸಾಧ್ಯವಿದೆ. ಹಣ ಇದ್ದರೂ ಕೆಲವರು ಸಾಮಾಜಿಕ ಕಾರ್ಯಗಳನ್ನ ಮಾಡುವಲ್ಲಿ ಹಿಂದೆ ಮುಂದೆ ನೋಡುತ್ತಾರೆ. ಅಂಥದರಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿರುವ, ಹಣವಂತನೂ ಅಲ್ಲದ ಮಹಾದೇವರ ಅವರು ಅಂಬ್ಯುಲೆನ್ಸ್ ನೀಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ವನಿತಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಯೋಗೇಶ್ ವಂದನಾರ್ಪಣೆ ಮಾಡಿದರು. ನಗರಸಭೆಯ ಉಪಾಧ್ಯಕ್ಷರಾದ ಪಿ.ಪಿ.ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಥಾಮ್ಸೆ, ಸದಸ್ಯೆ ಸಂಧ್ಯಾ ಬಾಡಕರ್, ಉಲ್ಲಾಸ್ ಕೇಣಿ, ಸುಹಾನಿ ಪಾಟೀಲ್, ಶಿಲ್ಪಾ ನಾಯ್ಕ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಪ್ರಕಾಶ್ ಗುನಗಿ, ಉದ್ಯಮಿ ಅನ್ಮೋಲ್ ರೇವಣಕರ್, ರೆಡ್ ಕ್ರಾಸ್‌ನ ಸಚ್ಚಿದಾನಂದ ನಾಯ್ಕ, ಪ್ರಮುಖರಾದ ಆನಂದು ನಾಯಕ, ಮಹಾದೇವ ಕೊಳಂಬಕರ್ ಅವರ ಪುತ್ರ ಮಂಜುನಾಥ ಕೊಳಂಬಕರ್, ಕರಾವಳಿ ನವನಿರ್ಮಾಣ ಸೇನೆಯ ಪದಾಧಿಕಾರಿಗಳು ಇದ್ದರು.

Share This
300x250 AD
300x250 AD
300x250 AD
Back to top