ಹೊನ್ನಾವರ: ಕೃಷಿಕರಿಗೆ ಉತ್ತೇಜನ ನೀಡಲು ಇಲ್ಲಿನ ಲಯನ್ಸ್ ಕ್ಲಬ್‌ನಿಂದ ಚಂದಾವರದ ವಡಗೆರೆಯಲ್ಲಿ ಗದ್ದೆ ನಾಟಿ ಮಾಡಿ ರೈತರಿಗೆ ಕೃಷಿ ಸಲಕರಣೆ ವಿತರಣೆ ಮಾಡಲಾಯಿತು.
ಲಯನ್ಸ್ ಕ್ಲಬ್ ಉಪಾಧ್ಯಕ್ಷ ಎಮ್.ಜಿ.ನಾಯ್ಕ ಮಾತನಾಡಿ, ಜೈ ಜವಾನ್ ಜೈ ಕಿಸಾನ್ ಎಂಬ ಮಾತಿನಂತೆ, ಸೈನಿಕರು ದೇಶದ ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡರೆ, ರೈತರು ಅನ್ನದಾತರೆನಿಸಿಕೊಂಡಿದ್ದಾರೆ. ಹೀಗಿರುವಾಗ ಇಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿಯೂ ಕೂಡಾ ಕೃಷಿ ಚಟುವಟಿಕೆಗಳು ನಶಿಸುತ್ತಿರುವುದು ಅತ್ಯಂತ ಅಘಾತಕಾರಿಯಾದ ಬೆಳವಣಿಗೆಯಾಗಿದೆ. ಆದ್ದರಿಂದ ಲಯನ್ಸ್ ಕ್ಲಬ್ ಕೃಷಿಗೆ ಮತ್ತು ಕೃಷಿಕರಿಗೆ ಉತ್ತೇಜನ ನೀಡುವ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದರು.
ಆನಂದ್ ನಾಯ್ಕ ಮಾತನಾಡಿ, ಲಯನ್ಸ್ ಕ್ಲಬ್ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ಭಾಗದ ಜನರು ಪ್ರಾಮಾಣಿಕವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ಮನಗಂಡು ಇಲ್ಲಿಯ ಕೃಷಿಕರಿಗೆ ಉತ್ತೇಜಿಸುವ ದೃಷ್ಟಿಯಿಂದ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 50 ರೈತರಿಗೆ ಕೃಷಿ ಸಲಕರಣೆಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಂತರಾಮ ನಾಯ್ಕ, ಎನ್.ಜಿ.ಭಟ್, ಅಶೋಕ ಮಹಾಲೆ, ಶೇಖರ ನಾಯ್ಕ, ಚಂದ್ರಕಾಂತ ನಾಯಕ್, ಮಹೇಶ ನಾಯ್ಕ, ಡಿ.ಡಿ.ಮಡಿವಾಳ್, ಪ್ರಭಾಕರ ಮಾಸ್ತಿಕಟ್ಟೆ, ಸಂತೋಷ ನಾಯ್ಕ, ಹರೀಶ್ ನಾಯ್ಕ, ಮಹೇಶ ನಾಯ್ಕ, ಮಂಜು ಆಚಾರ್ಯ ಮತ್ತಿತರರು ಇದ್ದರು.
ವೇದಿಕೆಯಲ್ಲಿ ಲಯನ್ ಕಾರ್ಯದರ್ಶಿ ರಾಜೇಶ ಸಾಳೇಹಿತ್ತಲ್, ಖಜಾಂಚಿ ರೋಶನ್ ಶೇಟ್ ಉಪಸ್ಥಿತರಿದ್ದರು. ಶಿಕ್ಷಕ ರಾಘವೇಂದ್ರ ನಾಯ್ಕ ನಿರೂಪಿಸಿದರು. ನಿಕಟಪೂರ್ವ ಕಾರ್ಯದರ್ಶಿ ಉದಯ ನಾಯ್ಕ ವಂದಿಸಿದರು.