ಭಟ್ಕಳ: ತಾಲ್ಲೂಕಿನ ಮುಂಡಳ್ಳಿಯಲ್ಲಿ ಅಕ್ರಮವಾಗಿ ಕೋಣಗಳ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಮುಂಡಳ್ಳಿ ಹೊಸ್ಮನೆಯ ನಾಗಪ್ಪ ನಾಯ್ಕ ಬಂಧಿತ. ಇನ್ನೊಬ್ಬ ಆರೋಪಿ ಗೋವಿಂದ ನಾಯ್ಕ ನಾಪತ್ತೆ ಆಗಿದ್ದಾನೆ. ಈ ಇಬ್ಬರು ಆರೋಪಿಗಳು ಸೇರಿಕೊಂಡು ವಧೆ ಮಾಡುವ ಉದ್ದೇಶದಿಂದ 40 ಸಾವಿರ ರೂಪಾಯಿ ಮೌಲ್ಯದ 2 ಕೋಣಗಳನ್ನು ಮುಂಡಳ್ಳಿ ಸತ್ಯನಾರಾಯಣ ದೇವಸ್ಥಾನದ ಸಮೀಪದಲ್ಲಿ ಯಾವುದೇ ಪಾಸ್- ಪರ್ಮಿಟ್ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡುವ ಸಂದರ್ಭದಲ್ಲಿ ಗ್ರಾಮೀಣ ಠಾಣೆ ಪೊಲೀಸರು ಕೋಣಗಳನ್ನು ರಕ್ಷಿಸಿ, ಆರೋಪಿ ನಾಗಪ್ಪನನ್ನು ಬಂಧಿಸಿದ್ದಾರೆ.
ಈ ಬಗ್ಗೆ ಗ್ರಾಮೀಣ ಠಾಣೆ ಪಿಎಸ್‌ಐ ಭರತಕುಮಾರ ದೂರು ನೀಡಿದ್ದು, ದೂರನ್ನು ದಾಖಲಿಸಿಕೊಂಡ ಎಎಸ್‌ಐ ಕೃಷ್ಣಾನಂದ ಸಿ.ನಾಯ್ಕ ತನಿಖೆ ಕೈಗೊಂಡಿದ್ದಾರೆ.