ಸಿದ್ದಾಪುರ: ಉಮ್ಮಚಗಿಯ ಶ್ರೀಮಾತಾ ಸಂಸ್ಕೃತ ಮಹಾಪಾಠಶಾಲೆಯಲ್ಲಿ ವ್ಯಾಸಂಗ ಮಾಡಿದ ತಾಲೂಕಿನ ಸಂಗೊಳ್ಳಿಮನೆಯ ಮಂಗಲಾ ಹಾಗೂ ಶ್ರೀಧರ ಹೆಗಡೆ ದಂಪತಿಯ ಸುಪುತ್ರ ಗುರುಪ್ರಸಾದ ಶ್ರೀಧರ ಹೆಗಡೆಯವರಿಗೆ ಜು.09ರಂದು ಬೆಂಗಳೂರಿನ ರಾಜಭವನದಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಒಂಭತ್ತನೆಯ ದೀಕ್ಷಾಂತ ಘಟಿಕೋತ್ಸವ ಮತ್ತು ದಶಮಾನೋತ್ಸವದ ಕಾರ್ಯಕ್ರಮದಲ್ಲಿ 2021ರಲ್ಲಿ ಜ್ಯೋತಿಷಶಾಸ್ತ್ರದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಆಚಾರ್ಯ (M.A) ಪದವೀಧರರಾದ ಇವರಿಗೆ ಮಾನ್ಯ ಉಪರಾಷ್ಟ್ರಪತಿಗಳಾದ ವೆಂಕಯ್ಯ ನಾಯ್ಡು ಹಾಗೂ ರಾಜ್ಯಪಾಲರಾದ ಥಾವರ್ ಚಂದ ಗೆಹ್ಲೋಟ್ ರವರು ಹಾಗೂ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಕೆ.ಇ. ದೇವನಾಥನ್ ಇನ್ಫೋಸಿಸ್ ಸಂಸ್ಥೆಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಶ್ರೀಮಾತಾ ಪಾಠಶಾಲೆಯ ಪ್ರಾಚಾರ್ಯರು ಅಧ್ಯಾಪಕರು ಉಪಸ್ಥಿತರಿದ್ದರು.