• Slide
    Slide
    Slide
    previous arrow
    next arrow
  • ಶೈಕ್ಷಣಿಕ ಸಂಪನ್ಮೂಲ ಕ್ರೋಡೀಕರಣ ಭಾರತಕ್ಕೆ ದೊಡ್ಡ ಸವಾಲು: ಪ್ರಭಾಕರ್ ಭಟ್

    300x250 AD

    ಶಿರಸಿ: ಭಾರತದ ಮಾನವ ಸಂಪನ್ಮೂಲಕ್ಕೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎನ್ನುವ ಮಾತನ್ನು ನಾವು ಕೇಳುತ್ತಿದ್ದೇವೆ. ಶೈಕ್ಷಣಿಕ ಸಂಪನ್ಮೂಲ ಕ್ರೋಡೀಕರಣ ಭಾರತಕ್ಕೆ ಇಂದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಪರಿಸರ ವಿಜ್ಞಾನಿ ಪ್ರಭಾಕರ್ ಭಟ್ ಹೇಳಿದರು.

     ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯುಎಸಿ ವಿಭಾಗ ಆಯೋಜಿಸಿದ್ದ ಪರಿಷ್ಕೃತ ನ್ಯಾಕ್ ಕಾರ್ಯ ಮತ್ತು ಎಕ್ಯುಎರ್, ಎಸ್ ಎಸ್ ಆರ್ ವರದಿ ತಯಾರಿಕೆ ಮತ್ತು ಸಮರ್ಪಣೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಇಂದು ಪರಿಷ್ಕೃತ ನ್ಯಾಕ್ ಮಾರ್ಗಸೂಚಿ ಕುರಿತು ಕೂಲಂಕುಷವಾಗಿ ಅಧ್ಯಯನ ಮಾಡುವ ಅಗತ್ಯತೆ ಇದ್ದು ಶಿಕ್ಷಣ ಸಂಸ್ಥೆಯ ಎಲ್ಲಾ ಪ್ರಾಧ್ಯಾಪಕರು ತಂಡವಾಗಿ ಕೆಲಸ ನಿರ್ವಹಿಸಿ ವರದಿ ತಯಾರಿಸುವ ಕಾರ್ಯ ಮಾಡಬೇಕು ಎಂದರು.

     ಡಾ ಕೇಶವ ಕೊರ್ಸೆ ಮಾತನಾಡಿ ಎಲ್ಲಾ ಕಾಲೇಜಿನಲ್ಲಿ ಕಾರ್ಯಕ್ರಮಗಳು, ಆಂತರಿಕ ಚಟುವಟಿಕೆಗಳು ನಡೆಯುತ್ತವೆ ಇವುಗಳನ್ನು ನ್ಯಾಕ್ ನಿರ್ದೇಶನದಂತೆ ನಡೆಸಬೇಕು. ಶಿಕ್ಷಣ ವಿದ್ಯಾರ್ಥಿ ಕೇಂದ್ರಿತವಾಗಿ ಇರಬೇಕು ಅಲ್ಲದೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಉಪಯೋಗ ಆಗುವ ಹಾಗೆ ಇರಬೇಕು.ನಮ್ಮ ಕಾರ್ಯ ಚಟುವಟಿಕೆಗಳು ಸಮಾಜಕ್ಕೆ ಎಷ್ಟು ಪ್ರಭಾವಿಸುತ್ತದೆ ಎನ್ನುವುದು ಮುಖ್ಯ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಉಪಸಮಿತಿ ಸದಸ್ಯರಾದ ಜಿ ಎಸ್ ಹೆಗಡೆ ಮಾತನಾಡಿ ಇಂತಹ ಕಾರ್ಯಾಗಾರಗಳು ಪ್ರಾಧ್ಯಾಪಕರಿಗೆ ಹೆಚ್ಚು ಉಪಯುಕ್ತ ವಾಗಿದೆ, ಮುಂದಿನ ದಿನಗಳಲ್ಲಿ ನ್ಯಾಕ್ ಕಾರ್ಯಗಳಿಗೆ ಬೇಕಾದ ಎಲ್ಲಾ ಸಹಾಯಗಳನ್ನು ಆಡಳಿತ ಮಂಡಳಿ ಮಾಡಲಿದೆ. ನಿವು ಕೈಗೊಳ್ಳುವ ಕ್ರಿಯಾಶೀಲ ಕೆಲಸಗಳನ್ನು ಹಾಗೂ ಉತ್ತಮ ಅನುಷ್ಠಾನಗಳನ್ನು ನಾವು ಬೆಂಬಲಿಸುತ್ತೇವೆ ಎಂದರು. 

    300x250 AD

      ಜೆ ಎಸ್ ಎಸ್ ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ ಜಗದೀಶ್ ಭರ್ಗಿ, ಡಾ ವೆಂಕಟೇಶ ಮುತಾಲಿಕ್ ನ್ಯಾಕ್ ತಯಾರಿ ಎಕ್ಯುಎರ್, ಎಸ್‌ ಎಸ್ ಆರ್ ವರದಿ ತಯಾರಿಕೆ ಕುರಿತು ತರಬೇತಿ, ಮಾಹಿತಿ ನೀಡಿದರು.

      ಕಾರ್ಯಕ್ರಮದಲ್ಲಿ ಎಂ ಇ ಎಸ್ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಎಸ್ ಕೆ ಹೆಗಡೆ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಅಶೋಕ ಭಟ್ಕಳ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಕಾಲೇಜಿನ ಪ್ರಾಧ್ಯಾಪಕರು ಕಾರ್ಯಾಗಾರದಲ್ಲಿ ಪಾಲ್ಗೊಂಡರು. ಕಾಲೇಜಿನ ಪ್ರಾಚಾರ್ಯ ಡಾ ಟಿ ಎಸ್ ಹಳೆಮನೆ ಸ್ವಾಗತಿಸಿದರು. ಐಕ್ಯುಎಸಿ ಸಂಚಾಲಕ ಡಾ ಎಸ್ ಎಸ್ ಭಟ್ ಪ್ರಾಸ್ಥಾವಿಸಿ, ಅತಿಥಿಗಳನ್ನು ಪರಿಚಯಿಸಿದರು. ಪ್ರೊ ಕಮಲಾಕರ್ ಹೆಗಡೆ ವಂದಿಸಿದರು. ಡಾ ಗಣೇಶ್ ಹೆಗಡೆ ನಿರೂಪಿಸಿದರು. 

    Share This
    300x250 AD
    300x250 AD
    300x250 AD
    Leaderboard Ad
    Back to top