• Slide
    Slide
    Slide
    previous arrow
    next arrow
  • ಹೆಂಡತಿ,ಮಗನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

    300x250 AD

    ಕುಮಟಾ: ತಾಲೂಕಿನ ಬಗಣೆ ಗ್ರಾಮದಲ್ಲಿ ಕ್ಲುಲಕ ಕಾರಣಕ್ಕೆ ರಾತ್ರಿ ವೇಳೆ ಗಲಾಟೆ ನಡೆದು, ಕುಡಿತದ ಅಮಲಿನಲ್ಲಿ ತನ್ನ ಹೆಂಡತಿ, ಮಗನನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಗ್ರಾಮದ ರಾಮಾ ಮರಾಠಿ ಎಂಬಾತ ತೀವ್ರ ಕುಡಿತದ ಚಟಕ್ಕೆ ಬಿದ್ದಿದ್ದು, ಪ್ರತಿನಿತ್ಯ ಮನೆಗೆ ಬಂದು ಪತ್ನಿ ತಾಕಿ ಮರಾಠಿ ಜೊತೆ ಜಗಳವಾಡುತ್ತಿದ್ದ. ಗುರುವಾರ ಕೂಡ ರಾತ್ರಿ ಮನೆಗೆ ಹತ್ತು ಘಂಟೆ ವೇಳೆಗೆ ಕುಡಿದು ಬಂದು ಹೆಂಡತಿ ತಾಕಿ ಜೊತೆ ಗಲಾಟೆ ಪ್ರಾರಂಭಿಸಿದ್ದ. ರಾತ್ರಿ ಎರಡು ಘಂಟೆಯವರೆಗೆ ಗಲಾಟೆ ನಡೆದಿದೆ. ಎರಡು ಘಂಟೆಯ ವೇಳೆಗೆ ಕುಪಿತನಾಗಿದ್ದ ರಾಮಾ, ಮಚ್ಚಿನಿಂದ ಏಕಾಏಕಿ ಮಲಗಿದ್ದ ಹೆಂಡತಿಗೆ ಹೊಡೆದು ಕೊಲೆ ಮಾಡಿದ್ದಾನೆ.

    300x250 AD

    ರಾಮಾ ಮರಾಠಿ ದಂಪತಿಗೆ ಲಕ್ಷ್ಮಣ ಹಾಗೂ ಭಾಸ್ಕರ್ ಎಂಬ ಇಬ್ಬರು ಮಕ್ಕಳಿದ್ದು, ಲಕ್ಷ್ಮಣ ಸ್ಥಳೀಯ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದರೆ, ಭಾಸ್ಕರ ಕುಮಟಾದ ಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿದ್ದ. ಮಳೆ ಹಿನ್ನಲೆಯಲ್ಲಿ ರಜೆ ಕೊಟ್ಟಿದ್ದರಿಂದ ಭಾಸ್ಕರ ಸಹ ಮನೆಗೆ ಬಂದಿದ್ದ. ಗುರುವಾರ ರಾತ್ರಿ ತಂದೆ ಮಚ್ಚನ್ನ ಹಿಡಿದು ತಾಯಿಗೆ ಕಡಿಯುವುದನ್ನ ನೋಡುವಾಗ ಭಾಸ್ಕರ ಹಾಗೂ ಲಕ್ಷ್ಮಣ ಇಬ್ಬರು ಓಡಿ ಹೋಗಿದ್ದಾರೆ. ಆದರೆ ಬೆನ್ನಟ್ಟಿ ಹೋದಾಗ ಕೈಗೆ ಸಿಕ್ಕ ಲಕ್ಷö್ಮಣನನ್ನ ತಂದೆಯೇ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ತಾನೂ ನೇಣು ಹಾಕಿಕೊಂಡು ರಾಮಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾಸ್ಕರ ಬದುಕಿದ್ದು, ಆತನ ಹೇಳಿಕೆ ಮೇಲೆ ಕುಮಟಾ ಠಾಣಾ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top