Slide
Slide
Slide
previous arrow
next arrow

ಕಿಬ್ಬಳ್ಳಿ ಪ್ರೌಢಶಾಲೆಯಲ್ಲಿ ಅರ್ಥಪೂರ್ಣವಾಗಿ ಜರುಗಿದ ಪ್ರತಿಜ್ಞಾವಿಧಿ ಸ್ವೀಕಾರ

300x250 AD

ಸಿದ್ದಾಪುರ; ತಾಲೂಕಿನ ಕಿಬ್ಬಳ್ಳಿಯ ಶ್ರೀ ಮಹಾಗಣಪತಿ ಪ್ರೌಢಶಾಲೆಯಲ್ಲಿ ಮತದಾರರ ಸಾಕ್ಷರತಾ ಸಂಘ ಹಾಗೂ ಸಮಾಜ ವಿಜ್ಞಾನ ಸಂಘ ಇದರ ಅಡಿಯಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ ಗೆ ಆಯ್ಕೆಯಾದ ಪ್ರತಿನಿಧಿಗಳ ಪ್ರತಿಜ್ಞಾವಿಧಿ ಸ್ವೀಕಾರ ಹಾಗೂ ಶಾಲಾ ವಿಷಯವಾರು ಸಂಘಗಳ ಉದ್ಘಾಟನಾ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಆಡಳಿತ ಮಂಡಳಿ ಸದಸ್ಯ ಶಂಕರನಾರಾಯಣ ಹೆಗಡೆ ಕಿಬ್ಬಳ್ಳಿಯವರು ನೆರವೇರಿಸಿ ಮಕ್ಕಳಿಗೆ ನಾಯಕತ್ವ ಗುಣ ಹಾಗೂ ಜವಾಬ್ದಾರಿಗಳ ಬಗೆಗೆ ಕಿವಿಮಾತು ಹೇಳಿದರು. ಶಾಲೆಯ ಮುಖ್ಯ ಶಿಕ್ಷಕ ಜಿ.ವಿ ಹೆಗಡೆಯವರು ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ನಾಗಪತಿ ಭಟ್ ಮಿಳಗಾರರವರು ವಹಿಸಿದ್ದರು. ಮತದಾರರ ಸಾಕ್ಷರತಾ ಹಾಗೂ ಸಮಾಜ ವಿಜ್ಞಾನ ಸಂಘದ ಸಂಚಾಲಕರಾದ ಸಹ ಶಿಕ್ಷಕರಾದ ಶ್ರೀಧರ ಹೆಗಡೆ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಹ ಶಿಕ್ಷಕರಾದ ಶಿವಾನಂದ ಮೋಟವ್ವನವರ್ ವಂದಿಸಿದರು. ಶಾಲಾ ಸಹಶಿಕ್ಷಕಿಯರಾದ ಶ್ರೀಮತಿ ಸುಮಿತ್ರಾ ಭಟ್ ಹಾಗೂ ಶ್ರೀಮತಿ ಅನಿತಾ ಸಿರ್ಸಿಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಮೈತ್ರಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದಳು.

300x250 AD
Share This
300x250 AD
300x250 AD
300x250 AD
Back to top