Slide
Slide
Slide
previous arrow
next arrow

ಗದ್ದೆಯಲ್ಲಿ ಕೆಲಸಮಾಡುತ್ತಿದ್ದವನ ಮೇಲೆ ಏಕಾಏಕಿ ಕರಡಿ ದಾಳಿ:ಗಂಭೀರ ಗಾಯ

300x250 AD

ಕಾರವಾರ: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನೋರ್ವನ ಮೇಲೆ ಕರಡಿ ದಾಳಿಮಾಡಿ ಗಾಯಗೊಳಿಸಿರುವ ಘಟನೆ ಜೋಯಿಡಾ ತಾಲೂಕಿನ ಬರಪಾಲಿ ಗ್ರಾಮದಲ್ಲಿ ನಡೆದಿದೆ. ಬರಪಾಲಿಯ ಸಂದೀಪ ಅಣಶಿಕರ (32) ಗಾಯಗೊಂಡ ರೈತರಾಗಿದ್ದಾರೆ. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿಯಾಗಿ ಎರಗಿ ಬಂದ ಕರಡಿ ಸಂದೀಪ ಅವರ ಮೇಲೆ ಹಾರಿ ದಾಳಿ ನಡೆಸಿದೆ. ಈ ವೇಳೆ ಗಾಬರಿಗೊಂಡು ಕರಡಿಯಿಂದ ತಪ್ಪಿಸಿಕೊಳ್ಳಲು ಕೂಗಾಡಿ ಸಾಕಷ್ಟು ಪ್ರಯತ್ನ ನಡೆಸಿದ್ರು, ಸಹ ಸಾಧ್ಯವಾಗಿಲ್ಲ.
ನಂತರ ಹೇಗೋ ತಪ್ಪಿಸಿಕೊಂಡಿದ್ದು ಮೈ ಮೇಲೆ ಸಾಕಷ್ಟು ಗಾಯಗಳಾಗಿದೆ. ಬಳಿಕ ಸಂದೀಪ ಅವರನ್ನು ತಕ್ಷಣ ಸ್ಥಳೀಯರು ಜೋಯಿಡಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ಈ ಬಗ್ಗೆ ಜೋಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top