ಶಿರಸಿ; ಸತ್ಯಂ ಅಕಾಡೆಮಿ, ಶಿರಸಿ ಹಾಗೂ ‘ಪ್ರಗತಿ ಪಥ’ ಪೌಂಡೇಶನ್ (ರಿ.), ಶಿರಸಿ ಇದರ ಉದ್ಘಾಟನಾ ಸಮಾರಂಭವು ಇತ್ತೀಚಿಗೆ ದೇವಿಕೇರಿ ರಸ್ತೆಯ ಸತ್ಯಂ ಅಕಾಡೆಮಿ, ಶ್ರೇಯಸ್ ಆರ್ಕೆಡ್, ಮೊದಲ ಮಹಡಿಯಲ್ಲಿ ನಡೆಯಿತು. ಪಿಯುಸಿ ವಿದ್ಯಾರ್ಥಿಗಳಿಗೆ ಪಿಯು ಬೋರ್ಡ್ ಪರೀಕ್ಷೆ, ಕೆ-ಸಿಇಟಿ (K-CET), ನೀಟ್ (NEET), ಜೆಇಇ (JEE) ಪರೀಕ್ಷೆಗೆ ಬೇಕಾದ ತರಬೇತಿ ನೀಡುವ ಕೋಚಿಂಗ್ ಸೆಂಟರ್ ಇದಾಗಿದೆ. ಡಾ. ಸತೀಶಕುಮಾರ ನಾಯ್ಕ ಇವರು ಅಕಾಡೆಮಿಯ ನಿರ್ದೇಶಕರಾಗಿದ್ದು, ನುರಿತ ಪ್ರಾಧ್ಯಾಪಕರಿಂದ ಇಲ್ಲಿ ತರಬೇತಿ ನೀಡಲಿದ್ದಾರೆ.
ಅಕಾಡೆಮಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಹಾಯಕ ಆಯುಕ್ತ ದೇವರಾಜ ಆರ್. ಮಾತನಾಡಿ, “ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರ ಜೀವನಕ್ಕೆ ಸತ್ಯಂ ಅಕಾಡೆಮಿ ದಾರಿದೀಪವಾಗಲಿ. ತುಂಬಾ ಪಾಲಕರು ತಮ್ಮ ಮಕ್ಕಳ ಸುರಕ್ಷತೆ ಹಾಗೂ ಆರ್ಥಿಕ ತೊಂದರೆ ಕಾರಣದಿಂದ ಮಕ್ಕಳನ್ನು ಬೇರೆ ಸ್ಥಳಗಳಿಗೆ ಶಿಕ್ಷಣಕ್ಕೆ ಕಳಿಸುತ್ತಿಲ್ಲ. ಅಂತಹ ವಿದ್ಯಾರ್ಥಿಗಳು ಸ್ಥಳೀಯ ಸತ್ಯಂ ಅಕಾಡೆಮಿಯ ಪ್ರಯೋಜನ ಪಡೆದುಕೊಳ್ಳಲಿ” ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಗುರುಮಠ ಕ್ಯಾದಗಿಕೊಪ್ಪ (ಅಂಡಗಿ) ದ ಪೂಜ್ಯಶ್ರೀ ಕಲ್ಯಾಣ ಸ್ವಾಮಿಗಳು, ತಾ. ಶಿರಸಿ ಇವರು ದಿವ್ಯ ಉಪಸ್ಥಿತಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಪ ಪೊಲೀಸ್ ವರಿಷ್ಟಾಧಿಕಾರಿಗಳಾದ ರವಿ ಡಿ. ನಾಯ್ಕ, ಮಾತನಾಡುತ್ತಾ, ಮುಂದಿನ ದಿನಗಳಲ್ಲಿ ಶಿರಸಿ ಜಿಲ್ಲಾ ಕೇಂದ್ರವಾಗುವ ಸಾಧ್ಯತೆಯಿದ್ದು, ಇಲ್ಲಿ ಸತ್ಯಂ ಅಕಾಡೆಮಿ ಪ್ರಾರಂಭವಾಗಿದ್ದು ಸ್ಥಳೀಯ ವಿದ್ಯಾರ್ಥಿಗಳಿಗೆ ತುಂಬಾ ಸಹಾಯವಾಗಲಿದೆ. ಮುಂದಿನ ದಿನಗಳಲ್ಲಿ ವೃತ್ತಿಪರ ಶಿಕ್ಷಣ ಸಂಸ್ಥೆಯಾಗಿ ಬೆಳೆಯಲಿ ಎಂದರು. ಸಾಗರದ ಭಾಗವತ್ ಹಾಸ್ಪಿಟಲ್ ನ ಡಾ. ಕಿಶನ್ ಭಾಗವತ್ ಮಾತನಾಡುತ್ತಾ, ವಿದ್ಯಾರ್ಥಿಗಳಲ್ಲಿ ಇರುವ ಸುಪ್ತ ಪ್ರತಿಭೆ ಹೊರತರುವಲ್ಲಿ ಸತ್ಯಂ ಅಕಾಡೆಮಿ ಕೆಲಸ ಮಾಡಲಿ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಸ್ವಾಮಿ ವಿವೇಕಾನಂದ ಬೆಸ್ಟ್ ಪಿ ಯು ಕಾಲೇಜು, ಪ್ರಾಚಾರ್ಯರಾದ ಶಿವಶಂಕರ ರಾವ್, ಮಾತನಾಡುತ್ತಾ ಶಿಕ್ಷಣರಂಗದ ಅಭಿವೃದ್ಧಿಗೆ ಸ್ಥಳೀಯ ಜನರು ಸ್ಥಳೀಯ ಅಕಾಡೆಮಿ ಬೆಳೆಸಲಿ ಎಂದರು. ಮಾರಿಕಾಂಬಾ ಆಸ್ಪತ್ರೆಯ ಡಾ. ಮಹೇಶ ಎನ್. ಹೆಗಡೆ, ಮಾತನಾಡಿ, ಜಿಲ್ಲೆಯಲ್ಲಿಯೇ ಮೊಟ್ಟ ಮೊದಲು ಇಂತಹ ಅಕಾಡೆಮಿ ಪ್ರಾರಂಭವಾಗುತ್ತಿದ್ದು ವಿದ್ಯಾರ್ಥಿಗಳು ಪ್ರಯೋಜನ ಪಡೆಯುವಂತಾಗಲಿ ಎಂದರು. , ಮೊಡರ್ನ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಹಾಲಪ್ಪ ಜಕಲಣ್ಣನವರ ಮಾತನಾಡುತ್ತಾ ಪಠ್ಯಕ್ರಮ ಶಿಕ್ಷಣ ಕಾಲೇಜಿನಲ್ಲಿ ಕಲಿತರೆ ಪರೀಕ್ಷಾ ಶಿಕ್ಷಣವನ್ನು ಇಂಥ ಅಕಾಡೆಮಿಯಲ್ಲಿ ತರಬೇತಿ ಪಡೆದು ಉನ್ನತಿ ಸಾಧಿಸಲಿ ಎಂದರು.
ಎಂ. ಇ. ಎಸ್., ಎಂ. ಎಂ. ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಡಾ ಕೋಮಲಾ ಭಟ್ ಮಾತನಾಡಿ ಕಾಲೇಜು ಜೀವನದಿಂದ ಶಿಸ್ತುಬದ್ದ ಕಾರ್ಯನಿರ್ವಹಿಸಿ ಇಂದು ಸತ್ಯಂ ಅಕಾಡೆಮಿ ಸ್ಥಾಪಿಸಿದ ಉನ್ನತ ಶಿಕ್ಷಣದ ಜೊತೆಗೆ ಧಾರ್ಮಿಕ ಹಿನ್ನೆಲೆ ಇರುವ ಡಾ. ಸತೀಶಕುಮಾರ ನಾಯ್ಕ ಇವರಿಗೆ ಶುಭವಾಗಲಿ ಎಂದು ಹಾರೈಸಿದರು. ಶಿರಸಿ ನಗರಸಭೆ ಅಧ್ಯಕ್ಷರಾದ ಗಣಪತಿ ನಾಯ್ಕ ಮಾತನಾಡಿ ಸ್ಥಳೀಯ ವಿದ್ಯಾರ್ಥಿಗಳಿಗೆ ಸತ್ಯಂ ಅಕಾಡೆಮಿ ಮಾರ್ಗದರ್ಶನ ನೀಡಲಿ ಎಂದರು. ಡಾ ಗಣೇಶ ಎಸ್. ಹೆಗಡೆ ಮಾತನಾಡಿ ಉತ್ತಮ ಶಿಕ್ಷಣದ ಹಿನ್ನಲೆ ಹಾಗೂ ಸೇವಾ ಮನೋಭಾವ ಹೊಂದಿರುವ ಡಾ. ಸತೀಶಕುಮಾರರವರು ಯಶಸ್ಸು ಕಾಣಲೆಂದು ಹಾರೈಸಿದರು. ಶ್ರೀಗುರುಮಠ ಕ್ಯಾದಾಗಿಕೊಪ್ಪ (ಅಂಡಗಿ) ಉಪಾಧ್ಯಕ್ಷ ಸಿ. ಎಫ್. ನಾಯ್ಕ,ಮಾತನಾಡುತ್ತಾ ಚಿಕ್ಕ ಹಳ್ಳಿಯಿಂದ ಬಂದು ಉನ್ನತ ಶಿಕ್ಷಣ ಪಡೆದು ಅಕಾಡೆಮಿ ಸ್ಥಾಪಿಸಿದ ಇವರಿಗೆ ಶುಭವಾಗಲಿ ಎಂದರು. ತೋಟಗಾರಿಕಾ ವಿಶ್ವವಿದ್ಯಾಲಯದ ನಿವೃತ್ತ ಉಪನ್ಯಾಸಕರು ಡಾ ನಾಗೇಶ್ ನಾಯ್ಕ ಮಾತನಾಡಿ ಉತ್ತರಕನ್ನಡದವರು ಸುಶಿಕ್ಷಿತ ವಿದ್ಯಾವಂತರು. ಇವರಿಗೆ ಸ್ಥಳೀಯ ಸತ್ಯಂ ಅಕಾಡೆಮಿ ಉತ್ತಮ ಭವಿಷ್ಯ ನೀಡಲಿ ಎಂದರು.
ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರದ ಭಾಗವಾಗಿ ದ್ವಿತೀಯ ಪಿಯುಸಿ ಯಲ್ಲಿ ಉತ್ತಮ ಅಂಕ ಪಡೆದ ಶಿರಸಿ ತಾಲ್ಲೂಕಿನ ಹಲವು ವಿದ್ಯಾರ್ಥಿಗಳು ಹಾಗೂ ಕೆಯುಡಿ ರಾಂಕ್ ಪಡೆದ ಸಂಗೀತ ವಿಭಾಗದ ವಿಭಾಶ್ರೀ ಹೆಗಡೆ, ಎಂ. ಇ. ಎಸ್., ಎಂ. ಎಂ. ಕಾಲೇಜು, ಶಿರಸಿ ಇವರುಗಳನ್ನು ಸನ್ಮಾನಿಸಲಾಯಿತು.
ಸತ್ಯಂ ಅಕಾಡೆಮಿಯ ನಿರ್ದೇಶಕರಾದ ಡಾ. ಸತೀಶಕುಮಾರ ನಾಯ್ಕ ಇವರು ಸ್ವಾಗತಿಸಿದರು. ವಕೀಲರಾದ ಮಹೇಶ ಕೆ. ಎಂ. ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಪ್ರಮೋದ ನಾಯ್ಕ ವಂದಿಸಿದರು