• Slide
    Slide
    Slide
    previous arrow
    next arrow
  • ತ್ಯಾಗಲಿ ಸೇವಾ ಸಹಕಾರಿ ಸಂಘದಲ್ಲಿ ಪೋಲಿಸ್ ಜನಸ್ನೇಹಿ ಸಭೆ

    300x250 AD

    ಸಿದ್ದಾಪುರ: ತಾಲೂಕಿನ ತ್ಯಾಗಲಿ ಸೊಸೈಟಿಯ ಶತಸಂಪನ್ನ ಸಭಾಭವನದಲ್ಲಿ ಜು.2 ರಂದು ಸಿದ್ದಾಪುರ ಪೊಲೀಸ್ ಠಾಣೆ ವತಿಯಿಂದ ಜನಸಂಪರ್ಕ ಸಭೆ ಮಾಡಲಾಯಿತು, ಸಭೆಯಲ್ಲಿ ಪೊಲೀಸ್ ಉಪನಿರೀಕ್ಷಕರಾದ ಮಾಂತಪ್ಪ ಕುಂಬಾರ್ ಮಾತನಾಡಿ ಕಳ್ಳತನದ ಬಗ್ಗೆ ಹಾಗೂ ಸಿಸಿಟಿವಿ ಅಳವಡಿಸುವ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿ ಹೇಳಿದರು ಸಿದ್ದಾಪುರ ಪೊಲೀಸ್ ನಿರೀಕ್ಷಕರಾದ ಕುಮಾರ್ ಕೆ ರವರು ಸಂಚಾರ ನಿಯಮಗಳ ಬಗ್ಗೆ ಅಡಿಕೆ ಕಳ್ಳತನದ ಬಗ್ಗೆ ಆನ್ಲೈನ್ ವಂಚನೆಯ ಸೈಬರ್ ಕ್ರೈಮ್ ಬಗ್ಗೆ ತಿಳಿಸಿ ಹೇಳಿದರು.

    ನಂತರ ಶಿರಸಿ ಉಪವಿಭಾಗದ ಡಿ. ಎಸ್ .ಪಿ. ರವಿ ಡಿ ನಾಯ್ಕರವರು ಮಾತನಾಡಿ ಪೊಲೀಸ್ ಠಾಣೆಗಳು ಜನಸ್ನೇಹಿ ಆಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಪೊಲೀಸ್ ಅoದ್ರೆ ಭಯ ಹೋಗಬೇಕು. ಕೆಲವೊಂದು ಸಣ್ಣ ವಿಷಯಗಳನ್ನು ಸಣ್ಣದಿರುವುಗಲೇ ಬಗೆಹರಿಸಿಕೊಳ್ಳಬೇಕು ಮುಂದೆ ಆಗುವ ದೊಡ್ಡ ಸಮಸ್ಯೆ ಮಾಡಿಕೊಳ್ಳಬಾರದು ಬೀಟ್ ಕಮಿಟಿ ಯೂತ್ ಕಮಿಟಿಯವರೊಂದಿಗೆ ಮಾಹಿತಿ ಹಂಚಿಕೊಳ್ಳಿ ,ಸಾರ್ವಜನಿಕರು ಪೊಲೀಸ್ ರೊಂದಿಗೆ ಸಹಕರಿಸಬೇಕು. ಮೊಬೈಲ್ನಿಂದಾಗುವ ಅನಾಹುತಗಳ ಬಗ್ಗೆ ಎಚ್ಚರಿಕೆವಹಿಸಿಲು ಹೇಳಿದರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ಹೇಳಿದರು,ನಮ್ಮ ಏರಿಯಾಕ್ಕೆ ಬರುವ ಎಲ್ಲಾ ಕಡೆ ಕ್ರೈಮ್ ಅನ್ನು ಹತೋಟಿಗೆ ತಂದಿದ್ದೇನೆ, ಕೆಲವು ಅಕ್ರಮ ಚಟುವಟಿಕೆಗಳನ್ನು ಹತೋಟಿಗೆ ತರುವುದಿದೆ , ಆಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದರು. ಡಿ ಎಸ್ ಪಿ ಅವರು ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿದರು.

    300x250 AD

    ಸಭೆಯ ಅಧ್ಯಕ್ಷತೆ ವಹಿಸಿದ ತ್ಯಾಗಲಿ ಸೊಸೈಟಿ ಅಧ್ಯಕ್ಷ ರಾದ ಎನ್ ಬಿ ಹೆಗಡೆ ಮತ್ತೀಹಳ್ಳಿಅವರು ಮಾತನಾಡಿ ಕಾನೂನು ನಮ್ಮ ರಕ್ಷಣೆ ಮಾಡುತ್ತೆ ಕಳೆದ 8-10 ವರ್ಷ ಗಳಿಂದ ಇಲಾಖೆ ಬದಲಾವಣೆ ಆಗುತ್ತಿದೆ ಕರ್ನಾಟಕ ಪೊಲೀಸ್ ದೇಶದಲ್ಲಿ ಹೆಸರು ಮಾಡಿದೆ, ಕರೋನಾ ಸಂದರ್ಭದಲ್ಲಿ ಪೋಲಿಸ್ ಇಲಾಖೆಯ ಕಾರ್ಯ ನೆನಪಿಡುವಂತಹದ್ದು, ಪೋಲಿಸ್ ಅಧಿಕಾರಿಗಳು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ,ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ನುಡಿದರು.
    ಸಭೆಯಲ್ಲಿ ವೇದಿಕೆ ಮೇಲಿದ್ದಂತಹ ಪೋಲಿಸ್ ಎಲ್ಲಾ ಅಧಿಕಾರಿಗಳಿಗೆ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ಹಾಗೇ ಸಭೆಯಲ್ಲಿ ಎಮ್ ಎಮ್ ಹೆಗಡೆ ಹಂಗಾರಖoಡ ಅವರು ವೇದಿಕೆ ಮೇಲಿದ್ದಂತಹ ಪೋಲಿಸ್ ಇಲಾಖೆಯ ದಕ್ಷ ಅಧಿಕಾರಿಯಾದಂತಹ ಡಿ ಎಸ್ ಪಿ ರವಿ.ಡಿ. ನಾಯ್ಕ ಅವರಿಗೆ ವಯಕ್ತಿಕವಾಗಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸಭೆಯಲ್ಲಿ ಸುತ್ತಮುತ್ತಲಿನ ನೂರೈವತ್ತಕ್ಕೂ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಪಿ ಎಸ್ ಐ ಮಲ್ಲಿಕಾರ್ಜುನ ಕೋರಾಣಿ. ಬೀಟ್ ಸಿಬ್ಬಂದಿಗಳಾದ ಕೃಷ್ಣ ನಾಯ್ಕ ಹಾಗೂ ಶ್ರೀಮತಿ ಸರಸ್ವತಿ ಗುಗ್ಗರಿ ಭಾಗವಹಿಸಿದ್ದರು. ತ್ಯಾಗಲಿ ಸೇವಾ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಸುಧಾಕರ್ ಹೆಗಡೆ ನಿರೂಪಣೆ ಮಾಡಿದರು,ತ್ಯಾಗಲಿ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರು, ಸೇವಾ ಸಹಕಾರಿ ಸಂಘದ ಸಿಬ್ಬಂದಿಗಳು, ಸಂಘದ ಸದಸ್ಯರು, ಸ್ವಸಹಾಯ ಸಂಘದವರು, ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ,ಹಿರಿಯರು,ಸಭೆಯಲ್ಲಿ ಹಾಜರಿದ್ದರು. ವಿ ಎಮ್ ಹೆಗಡೆ ತ್ಯಾಗಲಿ ಸ್ವಾಗತಿಸಿದರೆ, ಸಿದ್ದಾಪುರ ಪೋಲಿಸ್ ಠಾಣೆಯ ಉಪನೀರಿಕ್ಷಕರಾದ ಮಲ್ಲಿಕಾರ್ಜುನ ಕೊರಾಣಿ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top