• Slide
    Slide
    Slide
    previous arrow
    next arrow
  • ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ:ಈರ್ವರು ಪೋಲೀಸರ ವಶಕ್ಕೆ

    300x250 AD

    ದಾಂಡೇಲಿ: ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಹಿತ ವಶಪಡಿಸಿಕೊಂಡ ಘಟನೆ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬರ್ಚಿ ಕ್ರಾಸ್ ಹತ್ತಿರದ ವಿಟ್ನಾಳದಲ್ಲಿ ಶನಿವಾರ ನಡೆದಿದೆ.

    ತಾಲೂಕಿನ ಗಾಂವಠಾಣ ನಿವಾಸಿ ಮಹಮ್ಮದ್ ಜಮೀಲ್ ಮತ್ತು ಮಾರುತಿನಗರದ ಸಲೀಂ ಮಹಮ್ಮದ್ ಅಲಿ ವಾಹನದಲ್ಲಿ 50 ಕೆಜಿ ತೂಕದ ಒಟ್ಟು 60 ಚೀಲಗಳೊಂದಿಗಿದ್ದ 30 ಕ್ವಿಂಟಾಲ್ ಸರಕಾರದ ಅನ್ನಭಾಗ್ಯದ ಅಕ್ಕಿಯನ್ನು ಕಾನೂನುಬಾಹಿರವಾಗಿ ದಾಂಡೇಲಿ ಕಡೆಯಿಂದ ಬೆಳಗಾವಿ ಕಡೆಗೆ ಸಾಗಾಟ ಮಾಡುತ್ತಿದ್ದರು. ಈ ವೇಳೆ ಆಹಾರ ನಿರೀಕ್ಷಕ ಗೋಪಿ ಚೌವ್ಹಾಣ್, ಗ್ರಾಮೀಣ ಪೊಲೀಸ್ ಠಾಣೆಯ ತನಿಖಾ ಪಿಎಸೈ ಯಲ್ಲಾಲಿಂಗ ಕುನ್ನೂರು ಅವರು ಪೊಲೀಸ್ ತಂಡದೊಂದಿಗೆ ದಾಳಿ ನಡೆಸಿದ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ.

    300x250 AD

    ಆರೋಪಿಗಳನ್ನು ಬಂಧಿಸಿ, ಅಕ್ರಮಕ್ಕೆ ಬಳಸಲಾದ ವಾಹನ ಸೇರಿದಂತೆ, ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 30 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಂಡು ಅವಶ್ಯಕ ವಸ್ತುಗಳ ಅಧಿನಿಯಮ ಕಾಯ್ದೆ-1995ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಠಾಣೆಯ ಪಿಎಸೈ ಐ.ಆರ್.ಗಡ್ಡೇಕರ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top