ಕುಮಟಾ: ಪಟ್ಟಣದ ಚಿತ್ರಗಿ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ವಿವಿಧ ವಿಷಯ ಸಂಘಗಳ ಉದ್ಘಾಟನೆ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅಭಿಪ್ರೇರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ನಿವೃತ್ತ ಮುಖ್ಯಾಧ್ಯಾಪಕ ಎಂ.ರಮೇಶ್ ಉಪಾಧ್ಯಾಯ ಉದ್ಘಾಟಿಸಿದರು. ಕಸ್ತೂರಬಾ ಇಕೋ ಕ್ಲಬ್, ಬಿ.ಎ.ಸನದಿ ಸಾಹಿತ್ಯ ಸಂಘ,ಕಾನೂನು ಮತ್ತು ಸಾಕ್ಷರತಾ ಸಂಘ, ಜಾನ್ ಕಿಟ್ಸ್ ಇಂಗ್ಲೀಷ್ ಕ್ಲಬ್, ಸ್ವಾಮಿ ವಿವೇಕಾನಂದ ಸಮಾಜ ವಿಜ್ಞಾನ ಸಂಘ, ಆರ್ಯಭಟ ಗಣಿತ ಸಂಘ, ರಾಮನ್ ವಿಜ್ಞಾನ ಸಂಘ, ಕ್ರೀಡಾ ಸಂಘ, ಮೈತಿಲಿ ಶರಣ ಗುಪ್ತ ಹಿಂದಿ ಭಾಷಾ ಸಂಘ ಹೀಗೆ ಒಂಬತ್ತು ಸಂಘಗಳ ಸಂಕ್ಷಿಪ್ತ ಪರಿಚಯ ಹಾಗೂ ಈ ಸಾಲಿನ ಕಾರ್ಯ ಚಟುವಟಿಕೆಗಳನ್ನು ಶಿಕ್ಷಕ ಕಿರಣ ಪ್ರಭು ಸಾದರಪಡಿಸಿದರು.
ಶಾಲಾ ಮುಖ್ಯಾಧ್ಯಾಪಕ ಪಾಂಡುರಂಗ ವಾಗ್ರೇಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಧ್ಯಾಪಕ ವಿ.ಎನ್.ಭಟ್ ನಿರೂಪಿಸಿದರು. ಶಿಕ್ಷಕ ಅನಿಲ್ ರೋಡ್ರಗಿಸ್ ಸ್ವಾಗತಿಸಿದರು. ಕನ್ನಡ ಶಿಕ್ಷಕ ಸುರೇಶ್ ಪೈ ವಂದಿಸಿದರು. ಶಿಕ್ಷಕರು, ಸಿಬ್ಬಂದಿ ಸಹಕರಿಸಿದ್ದರು.