Slide
Slide
Slide
previous arrow
next arrow

ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ಪ್ರತಿಭಟನೆ

300x250 AD

ದಾಂಡೇಲಿ: ರಾಜಸ್ಥಾನದ ಉದಯಪುರದಲ್ಲಿ ಹಿಂದು ಯುವಕ ಕನ್ಹಯ್ಯಾ ಲಾಲ್ ಅವರ ಹತ್ಯೆಯನ್ನು ಖಂಡಿಸಿ ನಗರದ ಸೋಮಾನಿ ವೃತ್ತದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳದ ತಾಲೂಕು ಘಟಕದ ಆಶ್ರಯದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಮುಖಂಡ ವಾಸುದೇವ ಪ್ರಭು, ಕನ್ಹಯ್ಯಾ ಲಾಲ್ ಅವರನ್ನು ಜಿಹಾದಿಗಳು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ. ಭಾರತದಲ್ಲಿ ಮೊದಲೆಲ್ಲಾ ರಾತ್ರಿ ಹೊತ್ತಿನಲ್ಲಿ ಯಾರಿಗೂ ಗೊತ್ತಾಗದಂತೆ ಕೊಲೆ ಮಾಡುತ್ತಿದ್ದರು. ನಂತರ ಹಗಲು ಹೊತ್ತಿನಲ್ಲಿ ಮುಸುಕುಗಳನ್ನು ಹಾಕಿಕೊಂಡು ಕೊಲೆಯನ್ನು ಮಾಡಲು ಪ್ರಾರಂಭಿಸಿದರು. ಆದರೆ ಇತ್ತೀಚೆಗೆ ಯಾವುದೇ ಭಯವಿಲ್ಲದೆ ಹಗಲು ಹೊತ್ತಿನಲ್ಲಿಯೇ ಬರ್ಬರವಾಗಿ ಕೊಲೆ ಮಾಡಿ, ಮಾಡಿದ ಕೊಲೆ ಘಟನೆಯ ವಿಡಿಯೋವನ್ನು ಹರಿಬಿಡುವ ಮಟ್ಟಕ್ಕೆ ಬೆಳೆದಿದ್ದಾರೆ. ಇದು ದೇಶದ ಶಾಂತಿ ಸುವ್ಯವಸ್ಥೆಗೆ ಮಾರಕವಾಗಿದ್ದು, ಈಗಿನಿಂದಲೆ ಈ ಬಗ್ಗೆ ಎಚ್ಚರಿಕೆಯನ್ನು ವಹಿಸಿಕೊಂಡು, ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಹಾಗೂ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಜರಂಗ ದಳದ ಜಿಲ್ಲಾ ಸುರಕ್ಷಾ ಪ್ರಮುಖ ಚಂದ್ರು ಮಾಳಿ, ಕನ್ಹಯ್ಯಾ ಲಾಲ್ ಹತ್ಯೆ ಬೀಭತ್ಸ ಘಟನೆಯಾಗಿದೆ. ದೇಶದಾದ್ಯಂತ ಈ ಘಟನೆಯಿಂದ ಅಶಾಂತಿ ಸೃಷ್ಟಿಯಾದಂತಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೊಲೆ ಆರೋಪಿಗಳ ಮೇಲೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಆಗ್ರಹಿಸಿದರು.

300x250 AD

ಪ್ರತಿಭಟನೆಯಲ್ಲಿ ಬಜರಂಗ ದಳದ ಸಂಚಾಲಕ ನಾಗರಾಜ ಅನಂತಪುರ, ಪ್ರಮುಖರುಗಳಾದ ವಿನಯ್ ದಳವಾಯಿ, ಲಾಲ್ ಸಿಂಗ್, ಅಭಿಷೇಕ್, ಪ್ರಕಾಶ ಪಾಟೀಲ, ವಿಷ್ಣು ನಾಯರ್, ರಮೇಶ್, ಶೇಖರ, ಚಿದಾನಂದ ಕಳಶೆಟ್ಟಿ, ರವೀಂದ್ರ ಶಾಹ, ಬುದ್ಧಿವಂತಗೌಡ ಪಾಟೀಲ, ತುಕರಾಮ ಬಡಿಗೇರ, ವಿಷ್ಣು ವಾಜ್ವೆ, ಅನಿಲ್, ವಿಜಯ್ ಪರಾಂಜಪೆ, ಜೀವನ ಮಡಿವಾಳ, ಪ್ರಶಾಂತ, ರಮೇಶ್ ಮೊದಲಾದವರು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top