• Slide
  Slide
  Slide
  previous arrow
  next arrow
 • ವ್ಯಕ್ತಿ ನಾಪತ್ತೆ: ಸಿಕ್ಕಲ್ಲಿ ಮಾಹಿತಿ ನೀಡಲು ಸೂಚನೆ

  300x250 AD

  ಕಾರವಾರ: 61 ವರ್ಷ ಪ್ರಾಯದ ಗಣು ಗೋವೇಕರ ಎನ್ನುವ ವ್ಯಕ್ತಿಯೊಬ್ಬ ಜೊಯಿಡಾ ತಾಲೂಕಿನ ರಾಮನಗರದ ಕೃಷ್ಣಾದೇವಿಗಲ್ಲಿ ನಗರದ ನಿವಾಸಿಯಾಗಿದ್ದು, ವಿಪರೀತ ಕುಡಿತದ ಚಟ ಹೊಂದಿದ್ದ. ಈ ಹಿಂದೆ ಜಗಳ ಮಾಡಿದಾಗಲೆಲ್ಲಾ 8- 10 ದಿನಗಳವರೆಗೆ ಮನೆ ಬಿಟ್ಟು ಹೋಗಿ ಮತ್ತೆ ತಾನೇ ಮರಳಿ ಬರುತ್ತಿದ್ದವನು 2021ರ ನವೆಂಬರ್ 12ರ ರಾತ್ರಿ 11 ಗಂಟೆಯ ಸುಮಾರಿಗೆ ಕುಡಿಯಲು ತನ್ನ ಪೆನ್‌ಶನ್ ಹಣ ಕೊಡು ಎಂದು ಗಲಾಟೆ ಮಾಡಿದಾಗ ಹೆಂಡತಿ ಕೋರ್ಟ್ ಕೆಲಸಕ್ಕೆ ಬೇಕೆಂದು ಹೇಳಿದ್ದಕ್ಕೆ ಕುಡಿದು ಜಗಳ ಮಾಡಿ ಮನೆ ಬಿಟ್ಟು ಹೋದವನು ಈವರೆಗೆ ಮನೆಗೆ ಬಾರದಿದ್ದರಿಂದ ಹುಡುಕಾಡಿ ಸಿಗದೇ ಇರುವಾಗ ಕಾಣೆಯಾಗಿರುವ ತನ್ನ ಪತಿಯನ್ನು ಹುಡಿಕಿಕೊಡಿ ಎಂದು ಪತ್ನಿ ಪುಷ್ಪಾ ಗೋವೆಕರ ಜೊಯಿಡಾ ತಾಲೂಕು ರಾಮನಗರ ಪೊಲೀಸ್ ಠಾಣೆಯಲ್ಲಿ ಫಿರ್ಯಾದಿ ನೀಡಿದ್ದು, ದೂರಿನ್ವಯ ಪ್ರಕರಣ ದಾಖಲಾಗಿದೆ.

  ಕಾಣೆಯಾದ ವ್ಯಕ್ತಿಯು ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, 5 ಅಡಿ 3 ಅಂಗುಲ ಎತ್ತರ, ತಿಳಿ ಹಸಿರು ಬಣ್ಣದ (ನೀಲಿ ಹಾಗೂ ಕೆಂಪು ಬಣ್ಣದ ಗೆರೆಗಳಿಂದ ಕೂಡಿದೆ) ಶರ್ಟ್, ಬಿಳಿ ಬಣ್ಣದ ಹಾಫ್ ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿ ಎಲ್ಲಿಯಾದರೂ ಪತ್ತೆಯಾದಲ್ಲಿ ಜೊಯಿಡಾ ತಾಲೂಕಿನ ರಾಮನಗರ ಪೊಲೀಸ ಠಾಣೆಗೆ ಅಥವಾ ಜಿಲ್ಲಾ ಪೊಲೀಸ್ ನಿಯಂತ್ರಕರ ಕೊಠಡಿ ದೂರವಾಣಿ ಸಂಖ್ಯೆ: 08382- 226 550ಗೆ ಸಂಪರ್ಕಿಸಲು ರಾಮನಗರ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top