Slide
Slide
Slide
previous arrow
next arrow

ಅವಘಡ, ಅಪಘಾತ ,ಅನಾರೋಗ್ಯ ಮರಣಕ್ಕೆ ಸಾಮಾಜಿಕ ಭದ್ರತೆಯ ಯೋಜನೆಯ ಯಾವಾಗ ಪ್ರಾರಂಭ ?

300x250 AD

eUK ವಿಶೇಷ : ಅವಘಡ, ಅಪಘಾತ ,ಅನಾರೋಗ್ಯ ದಿಂದ ಮರಣಹೊಂದಿದರೆ ಆ ಕುಟುಂಬಕ್ಕೆ ಯಾವುದಾದರೂ ಸರಕಾರಿ ಯೋಜನೆಗಳಿಂದ ಪ್ರಯೋಜನ ಇದೆಯಾ. ? ಕೆಲವು ಮಟ್ಟಿಗೆ ಹೌದು ಎನ್ನಬಹುದು.ಸರಕಾರಿ ಯೋಜನೆ ಅಂದ ಮೇಲೆ ಈ ಯೋಜನೆಗಳಿಗೆ ಎಪಿಎಲ್ ಎಂದು ಬಿಪಿಎಲ್ ಎಂದು ವ್ಯತ್ಯಾಸ ಇದೆಯಾ /ಆರಕ್ಷಣ/ಆದಾಯ/ಜಾತಿ ನಿಯಮ ಇದಿಯಾ? ಇಲ್ಲ. ಯೋಜನೆಯ ಚಂದಾದಾರರಾಗಿದ್ದರೆ ನಿಯಮಿತವಾಗಿ ಇರುವಂತಹ ಯೋಜನೆಯಿಂದ ಕುಟುಂಬಕ್ಕೆ ಪರಿಹಾರ ಕೊಡುವಂತೆ ಆಗುತ್ತದೆ. ಹಾಗಾದರೆ ಈ ಸರಕಾರಿ ಯೋಜನೆಗಳು ಯಾವವು ? ಇದರ ಚಂದಾದಾರಿಕೆಯನ್ನು ಎಲ್ಲಿ ಪಡೆಯಬಹುದು ? ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಎಲ್ಲ ಖಾಸಗಿ ಆರ್ ಬಿ ಐ ನೊಂದಾಯಿತ ಬ್ಯಾಂಕ್ ಗಳಲ್ಲಿ, ಅಂಚೆ ಕಚೇರಿಯಲ್ಲಿ ಇದರ ಚಂದಾದಾರಿಕೆಯನ್ನು ಪಡೆಯಬಹುದು.

ಇದು ಪ್ರತಿ ವರ್ಷ 1 ಜೂನ್ ರಿಂದ ಮೇ 30ರವರೆಗೆಗಿನ ಆವಧಿಯದಾಗಿರುತ್ತದೆ. ಈಗಾಲೇ ಚಂದಾದಾರರಾಗಿದ್ದವರು ಬ್ಯಾಂಕ್ ಖಾತೆಯಲ್ಲಿ ಅವಶ್ಯ ಮೊತ್ತ ಇರುವಂತೆ ಜಾಗ್ರತೆ ವಹಿಸಿರಿ. ಚಂದಾದಾರರಾಗದವರೂ ಅವಶ್ಯ ಚಂದಾದಾರರಾಗಿ.
ಪಕ್ಕದ ಮನೆಯವರು,ಎದುರಿಮನೆಯರು,ಹತ್ತಿರದ ಸಂಬಂಧಿಗಳು, ನಿಮ್ಮ ಹಿತೈಷಿಗಳಿಗೆ ಚಂದಾದಾರರಾಗಲು ಪ್ರೇರೇಪಿಸಿ.

ಹಾಗಾದರೆ ಯೋಜನೆಗಳು ಯಾವವು ?
1. ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ: 18-50 ವರ್ಷದವರೆಗಿನ ಎಲ್ಲ ಸ್ತ್ರೀ-ಪುರುಷರು ಎರಡು ಲಕ್ಷ ರೂಪಾಯಿವರೆಗಿನ ಜೀವ ವಿಮೆಯನ್ನು ವರ್ಷವೊಂದಕ್ಕೆ 330 ರೂಪಾಯಿಯನ್ನು ಪಾವತಿಸಿ ಪಡೆಯಬಹುದು.

2. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ.
18-70 ವರ್ಷದವರೆಗಿನ ಎಲ್ಲ ಸ್ತ್ರೀ-ಪುರುಷರು ಎರಡು ಲಕ್ಷ ರೂಪಾಯಿವರೆಗಿನ ಅಪಘಾತ ವಿಮೆ. ವರ್ಷವೊಂದಕ್ಕೆ 12 ರೂಪಾಯಿಯನ್ನು ಪಾವತಿಸಿ ಪಡೆಯಬಹುದು.
3. RUPAY ಕಾರ್ಡ 45 ದಿನಕ್ಕೊಮ್ಮೆ ಬಳಸಿ ಒಂದು ಲಕ್ಷದ ಅಪಘಾತ ವಿಮೆ ಸೌಲಭ್ಯ ಹೊಂದಬಹುದು.

300x250 AD

ಜಗತ್ತಿನಲ್ಲಿಯೇ ಅತಿ ಕಡಿಮೆ ಹಣ ಪಾವತಿಯ ವಿಮಾ ಯೋಜನೆಗೆ ಚಂದಾದಾರಿಕೆಯನ್ನು ಪಡೆಯದೆ ಇದ್ದವರು ಶಿಕ್ಷಿತರೇ ಹೆಚ್ಚು ಎಂಬ ಅಂಬೋಣ ಬ್ಯಾಂಕಿಂಗ್ ತಜ್ಞರದ್ದು. ಅಂದರೆ ದೇವರು ಕೊಟ್ಟರೂ ಪೂಜಾರಿ ಪಡೆಯದ ಪರಿಸ್ಥಿತಿ.

ಯೋಜನೆ ಜಾರಿಗೆ ಬಂದು 6-7 ವರ್ಷಗಳು ಕಳೆದರು ಆಡಳಿತ ಪಕ್ಷದ ಕಾರ್ಯಕರ್ತರಲ್ಲಿ ಈ ಬಗ್ಗೆ ನನ್ನದೇ ಆದ ರೀತಿಯಲ್ಲಿ ಸರ್ವೇ ನಡೆಸಿದಾಗ ಅಪಘಾತ ವಿಮೇ 100 ಜನರಲ್ಲಿ 10 , ಜೀವವಿಮೆ 100 ಜನರಲ್ಲಿ 5 ಚಂದಾದಾರರಾಗಿರು ಸಾಧ್ಯತೆ ಇದೆ.ಎರಡೂ ಯೋಜನೆಯ ಯಾವೂದೇ ಮಾಹಿತಿ ತಮಗಿಲ್ಲ ಎಂದು ಹೇಳುವ ಕಾರ್ಯಕರ್ತರ ಸಂಖ್ಯೆ ಹೆಚ್ಚಿದೆಯಂತೆ. ಆಗಾಗ ನಡೆಯುವ ಅಭ್ಯಾಸ ವರ್ಗಗಳಲ್ಲಿ ಇತಿಹಾಸ ಮತ್ತೇನು ಮತ್ತೇನು ಹೇಳುವ ಬದಲು ಕಾರ್ಯಕರ್ತರಿಗೆ ಕೇಂದ್ರ ಸರ್ಕಾರದ ಕನಿಷ್ಠ ಇಂತಹ ಯೋಜನೆಗಳ ಬಗ್ಗೆ ತಿಳಿಸಿ ಚಂದಾದಾರರಾಗಲು ಪ್ರೇರೇಪಿಸುವಂತಹ ಸಂಕಲ್ಪ ಕೈಗೊಳ್ಳುವ ಅವಶ್ಯಕತೆ ಇದೆ.


ಮಾಹಿತಿ ಕೃಪೆ — ಡಾ ರವಿಕಿರಣ ಪಟವರ್ಧನ ಶಿರಸಿ

Share This
300x250 AD
300x250 AD
300x250 AD
Back to top