ಯಲ್ಲಾಪುರ: ಪ್ರಕೃತಿಯೂ ತಿಳಿಸುವ ಶಾಸ್ತ್ರ ಗಳ ಅಧ್ಯಯನ ನಿರಂತರ ನಡೆಯಬೇಕು. ಅದನ್ನು ಸಮಾಜದೊಂದಲೂ ಪ್ರೋತ್ಸಾಹ ಸಿಗಬೇಕು ಎಂದು ಚವತ್ತಿಯ ಪ್ರಗತಿಪರ ಕೃಷಿಕ ಸುಧೀರ ಬಲ್ಸೆ ಹೇಳಿದರು. ಅವರು ಇತ್ತಿಚೆಗೆ ತಾಲೂಕಿನ ಉಮಚ್ಗಿ ಸಮೀಪ ಕಾಗಾರಕೊಡ್ಲಿನ ಸುಮೇರು ಜ್ಯೋತಿರ್ವನದಲ್ಲಿ ನಡೆದ ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಭಾರತೀಯ ಪಂಚಾಂಗ ಪ್ರಕೃತಿಯ ಪ್ರತಿಬಿಂಬ ಪುಸ್ತಕದ ಕರಡು ಪ್ರತಿಯನ್ನು ಬಿಡುಗಡೆ ಮಾಡಿ ಮಾತನಾಡುತಿದ್ದರು.
ಪರಿಷತ್ತಿನ ನಿರ್ದೇಶಕ ಹಾಗೂ ಪುಸ್ತಕ ದ ಲೇಖಕ ಡಾ. ಕೆ.ಸಿ ನಾಗೇಶ್ ಭಟ್ ಮಾತನಾಡಿ ಭಗವಂತ ಸೃಷ್ಟಿ ಯಲ್ಲಿ ಭಾರತೀಯ ಋಷಿಗಳ ದೃಷ್ಟಿ ಯನ್ನು ಭಾರತೀಯ ಪಂಚಾಂಗ ತಿಳಿಸುತ್ತದೆ. ಕಾಲವನ್ನು ಆಶ್ರಯಿಸಿಯೇ ಪ್ರಕೃತಿ ಯಿದೆ. ಈ ಪ್ರಕೃತಿ ಯನ್ನು ಅನುಸರಿಸಿಯೇ ಕಾಲವಿರುತ್ತದೆ.ಹೀಗಾಗಿ ಭಾರತೀಯ ಪಂಚಾಂಗ ಪ್ರಕೃತಿ ಯ ಪ್ರತಿಬಿಂಬ ಆಗಿದೆ. ಪಂಚಾಂಗದ ಅಧ್ಯಯನ ಪ್ರತಿಯೊಬ್ಬರಿಗೂ ಆಗಬೇಕಿದ್ದು , ಎಲ್ಲರೂ ಪಂಚಾಂಗದ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದು ನಾಗೇಶ್ ಭಟ್ ಅಭೀಪ್ರಾಯ ವ್ಯಕ್ತಪಡಿಸಿದರು. ಉಮ್ಮಚ್ಗಿಯ ಭಾರತೀಯ ಜ್ಞಾನ ವಿಜ್ಞಾನ ಪರಿಷತ್ತ ಹಾಗೂ ಕಾಗಾರಕೊಡ್ಲಿನ ಸಾತ್ವಿಕ್ ಪೌಂಡೇಷನ್ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದ ಆರಂಭದಲ್ಲಿ ವಾಣಿ ಯೋಗೀಶ್ ಪ್ರಾರ್ಥಿಸಿದರು. ಗುರುಪಾದ ಹೆಗಡೆ ಸ್ವಾಗತಿಸಿದರೇ , ಕವಿಯಿತ್ರಿ ಸುಜಾತ ಹೆಗಡೆ ನಿರ್ವಹಿಸಿದರು. ಕೊನೆಯಲ್ಲಿ ಕುಮಾರ ಬಾಳೆಹದ್ದ ವಂದಿಸಿದರು
ಪ್ರಕೃತಿಯ ಶಾಸ್ತ್ರಕ್ಕೆ ಸಮಾಜ ಪ್ರೋತ್ಸಾಹ ಅಗತ್ಯ
