Slide
Slide
Slide
previous arrow
next arrow

2 ವಾರದಲ್ಲಿ 200 ಕೋಟಿ ರೂ. ಆದಾಯ ಗಳಿಸಿದ ‘ದಿ ಕಾಶ್ಮೀರ್ ಫೈಲ್ಸ್’

300x250 AD

ನವದೆಹಲಿ: ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ ದಿನ ಕಾಶ್ಮೀರ್ ಫೈಲ್ಸ್’ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಿದೆ.

ಕಾಶ್ಮೀರಿ ಪಂಡಿತರ ಮೇಲೆ ನಡೆದ ಹಿಂಸಾಚಾರದ ಸತ್ಯ ಘಟನೆಗಳನ್ನು ಆಧರಿಸಿದ ಈ ಸಿನಿಮಾ ದೇಶದಲ್ಲಿ ಅತ್ಯಂತ ಚರ್ಚೆಗೆ ಒಳಪಟ್ಟ ಮತ್ತು ವೀಕ್ಷಣೆಗೆ ಒಳಪಟ್ಟ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ. ಭಾರತ ಮಾತ್ರವಲ್ಲದೆ ಜಗತ್ತಿನಲ್ಲೇ ಹೆಚ್ಚು ಸದ್ದು ಮಾಡುತ್ತಿದೆ.

ಬಿಡುಗಡೆಯಾದ ಕೇವಲ ಒಂದೇ ದಿನಕ್ಕೆ 3.55 ಕೋಟಿ ರೂಪಾಯಿ ಗಳಿಕೆಯನ್ನು ಕಂಡ ಈ ಸಿನಿಮಾ, ನಿನ್ನೆ ಬಿಡುಗಡೆಯಾಗಿ 13 ದಿನಗಳನ್ನು ಪೂರೈಸಿದ್ದು 200 ಕೋಟಿ ರೂಪಾಯಿ ಗಳಿಸಿದೆ.

300x250 AD

ಬಿಡುಗಡೆಯಾಗಿ ಕೇವಲ ಎರಡು ವಾರಗಳಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಗಳಿಸಿರುವುದು ನಿಜಕ್ಕೂ ಒಂದು ದಾಖಲೆಯಾಗಿದೆ. ಈ ಹಿಂದೆ ಬಿಡುಗಡೆಯಾದ ಎರಡು ವಾರಗಳಲ್ಲಿ ಬಾಹುಬಲಿ ಸಿನಿಮಾ 120 ಕೋಟಿ ರೂಪಾಯಿ ಗಳಿಸಿತ್ತು.

ಅದೇನೇ ಇದ್ದರೂ ʼದಿ ಕಾಶ್ಮೀರಿ ಫೈಲ್ಸ್ʼ ಸಿನಿಮಾ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದು ಕೊಂಡಿದ್ದು, ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಜಾಗೃತಗೊಳ್ಳುವಂತೆ ಮಾಡಿದೆ.

Share This
300x250 AD
300x250 AD
300x250 AD
Back to top