Slide
Slide
Slide
previous arrow
next arrow

ವಿವಿಧ ಕ್ಷೇತ್ರಗಳಲ್ಲಿ ನಾರಿಶಕ್ತಿ ಸಾಧನೆಗೆ ಸೆಲ್ಯೂಟ್‌ ಎಂದ ಪ್ರಧಾನಿ

300x250 AD

ನವದೆಹಲಿ: ಇಂದು ವಿಶ್ವ ಮಹಿಳಾ ದಿನಾಚರಣೆ. ಈ ಹಿನ್ನೆಲೆಯಲ್ಲಿ ಸರಣಿ ಟ್ವಿಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನಾರಿಶಕ್ತಿಗೆ ಸೆಲ್ಯೂಟ್‌ ಎಂದಿದ್ದಾರೆ.

“ಮಹಿಳಾ ದಿನದಂದು, ನಮ್ಮ ನಾರಿ ಶಕ್ತಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅವರ ಸಾಧನೆಗೆ ನನ್ನ ಸೆಲ್ಯೂಟ್ . ಭಾರತ ಸರ್ಕಾರವು ಮಹಿಳೆಯರ ಘನತೆ ಮತ್ತು ಅವಕಾಶಕ್ಕೆ ಒತ್ತು ನೀಡುತ್ತಿದ್ದು, ವಿವಿಧ ಯೋಜನೆಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ” ಎಂದಿದ್ದಾರೆ.

“ಆರ್ಥಿಕ ಸೇರ್ಪಡೆಯಿಂದ ಸಾಮಾಜಿಕ ಭದ್ರತೆ, ಗುಣಮಟ್ಟದ ಆರೋಗ್ಯ ಸೇವೆ, ವಸತಿ, ಶಿಕ್ಷಣದಿಂದ ಉದ್ಯಮಶೀಲತೆ, ಭಾರತದ ಅಭಿವೃದ್ಧಿ ಪಯಣದಲ್ಲಿ ನಮ್ಮ ನಾರಿ ಶಕ್ತಿಯನ್ನು ಮುಂಚೂಣಿಯಲ್ಲಿಡಲು ಹಲವು ಪ್ರಯತ್ನಗಳನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಯತ್ನಗಳು ಇನ್ನೂ ಹೆಚ್ಚಿನ ಹುರುಪಿನಿಂದ ಮುಂದುವರಿಯಲಿವೆ” ಎಂದಿದ್ದಾರೆ.

300x250 AD

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸಬಲೀಕರಣಕ್ಕೆ ವಿವಿಧ ಗಣ್ಯರ ಕೊಡುಗೆಯನ್ನು ಗುರುತಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ಕಚ್‌ನ ಧೋರ್ಡೊದಲ್ಲಿ ನಡೆಯುವ ಸೆಮಿನಾರ್‌ನಲ್ಲಿ 500ಕ್ಕೂ ಹೆಚ್ಚು ಮಹಿಳಾ ಸಾಧಕರು ಭಾಗವಹಿಸಲಿದ್ದಾರೆ. ಸೆಮಿನಾರ್​ನಲ್ಲಿ ಸಂಸ್ಕೃತಿ, ಧರ್ಮ, ಭದ್ರತೆ, ಸಾಮಾಜಿಕ ಸ್ಥಾನಮಾನ ಮತ್ತು ಭಾರತ ಸಂಸ್ಕೃತಿಯಲ್ಲಿ ಮಹಿಳೆಯರ ಪಾತ್ರದ ಕುರಿತು ಸಂವಾದಗಳನ್ನು ನಡೆಸಲಾಗುತ್ತಿದೆ. ಇದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಲ್ಯಾಣ ಯೋಜನೆಗಳ ಜೊತೆಗೆ ಮಹಿಳೆಯರ ಸಾಧನೆಗಳ ಬಗ್ಗೆ ಚರ್ಚೆ ನಡೆಯಲಿದೆ.

Share This
300x250 AD
300x250 AD
300x250 AD
Back to top