Slide
Slide
Slide
previous arrow
next arrow

ಆಯುರ್ವೇದ ದಿನಚರಿ ಪಾಲನೆ ಆರೋಗ್ಯ ವರ್ಧನೆಗೆ ಉತ್ತಮ ಮಾರ್ಗ;ಡಾ.ವಿಶ್ವನಾಥ ಅರಳಿಕಟ್ಟಿ

300x250 AD

ಶಿರಸಿ:ಆಯುರ್ವೇದದ ಮೂಲ ಉದ್ದೇಶ ರೋಗ ಬರದಂತೆ ತಡೆಗಟ್ಟುವದು. ರೋಗ ಬಂದ ಮೇಲೆ ಚಿಕಿತ್ಸೆ ಮಾಡುವದು ಪಂಚಕರ್ಮ ಚಿಕಿತ್ಸೆ. ಪಂಚಕರ್ಮ ಎಂದರೆ ಮಸಾಜ್ ಸೆಂಟರ್ ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ.ಇದನ್ನು ಮಾಡುವದು ದೇಹ ಶೋಧನೆಗಾಗಿ ದೇಹ ಶುದ್ಧಿಯ ನಂತರ ಚಿಕಿತ್ಸೆಯ ಪರಿಣಾಮ ಉತ್ತಮವಾಗಿರುತ್ತದೆ. ದೇಹ ಶುದ್ಧಿ ಎಂದರೇ ದೋಷತ್ರಯವಾದ ವಾತ,ಪಿತ್ತ, ಕಫ ಹೊರಹಾಕುವ ಕ್ರಿಯೆ ಎಂದು ಸಿದ್ದಾಪುರ ಆರೋಗ್ಯ ಭಾರತಿಯ ತಾಲುಕಾ ಅಧ್ಯಕ್ಷ ಡಾ.ವಿಶ್ವನಾಥ ಅರಳಿಕಟ್ಟಿ ಹೇಳಿದರು.

ಅವರು ಯೂತ್ ಫಾರ್ ಸೇವಾ ಶಿರಸಿ ಮತ್ತು ಆರೋಗ್ಯ ಭಾರತಿ ಸಿರಸಿ ಸಂಯುಕ್ತಾಶ್ರಯದಲ್ಲಿ ಶಿರಸಿ ತಾಲೂಕಿನ ಹನುಮಂತಿಯಲ್ಲಿ ಏರ್ಪಡಿಸಿದ್ದ ಉಚಿತ ಮಂಡಿನೋವಿನ ತಪಾಸಣಾ ಶಿಬಿರದಲ್ಲಿ ಸಂಪನ್ಮೂಲ ತಜ್ಞ ವೈದ್ಯರಾಗಿ ಮಾತನಾಡುತ್ತಾ ಚರ್ಮ , ಮಂಡಿನೋವು ಬೆನ್ನುನೋವು , ತಲೆನೋವು ಕಾಯಿಲೆಗಳಿಗೆ ಆಯುರ್ವೇದಲ್ಲಿ ಯಶಸ್ವಿ ಚಿಕಿತ್ಸೆ ಇದೆ.ಅಧಿಕವಾಗಿರುವ ತೂಕ, ಕ್ಯಾಲ್ಸಿಯಂ ಕೊರತೆ, ಮೊಣಕಾಲು ಚಿಪ್ಪಿನ ಸವೆತ,ಅತಿಯಾದ ಕೆಲಸ, ಮೊದಲಾದ ಕಾರಣಗಳಿಗೆ ಮಂಡಿನೋವು ಬರುತ್ತದೆ. ಇದನ್ನು ಆಯುರ್ವೇದ ದಿನಚರಿ ಪಾಲನೆ, ಹಸಿರು ಆಹಾರ, ನಿತ್ಯ ನಿಯಮಿತ ವ್ಯಾಯಾಮ, ನಮ್ಮ ಆಹಾರ ಶೈಲಿ ಇವುಗಳಿಂದ ಮಂಡಿನೋವು ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಡಾ. ಮಧುಮತಿ ಹೆಗಡೆ ಕೊಳಗಿಬೀಸ್ ಅವರು ಮಂಡಿನೋವು ಮತ್ತು ಮನೆಮದ್ದು ಕುರಿತು ಮಾತನಾಡಿದರು.

ಆಯುರ್ವೇದ ವೈದ್ಯರು ಧಾತ್ರಿ ಚಿಕಿತ್ಸಾಲಯ ಶಿರಸಿಯ ಡಾ. ವಿನಾಯಕ ಹೆಬ್ಬಾರ , ಆಯುರ್ವೇದ ವೈದ್ಯರು, ಆದಿಶಕ್ತಿ ಕ್ಲಿನಿಕ್ ಶಿರಸಿಯ
ಡಾ.ಪೂರ್ಣಿಮಾ ಪಂಚಾಳ ಇವರುಗಳು ತಜ್ಞ ವೈದ್ಯರಾಗಿ ಉಚಿತ ತಪಾಸಣೆ ನಡೆಸಿಕೊಟ್ಟರು.

ಹುಣಸೆಕೊಪ್ಪ ಗ್ರಾಮಪಂಚಾಯತ ಅಧ್ಯಕ್ಷ ಪ್ರಶಾಂತ ಗೌಡರ್ ಅವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು.

ಗ್ರಾಪಂ ಉಪಾಧ್ಯಕ್ಷ ಹೇಮಾವತಿ ಗೌಡ, ಆರೋಗ್ಯ ಭಾರತಿಯ ಶಿರಸಿ ವಿಭಾಗ ಸಹಸಂಯೋಜಕ ನಾಗೇಶ ಪತ್ತಾರ, ಆಯುಷ್ ಔಷಧ ಕಂಪನಿಯ ಶ್ಯಾಮ ಸುಂದರ ಹೆಗಡೆ, ಗಜಾನನ ಭಟ್ಟ್ ತಾರಗೋಡ ಉಪಸ್ಥಿತರಿದ್ದರು.

300x250 AD

100 ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಮಂಡಿನೋವಿನ ತಪಾಸಣೆ ನಡೆಸಿ ಔಷಧ ವಿತರಿಸಲಾಯಿತು.

ಶಿರಸಿ ನಗರದ ಧನ್ಯಾಫಾರ್ಮಾ ಸುರೇಶ ಉಪಾಧ್ಯಾಯ, ಸ್ಪಂದನಾ ಆಯುಷ ಮೆಡಿಕಲ್ ಸಂದೀಪ್, ಶ್ರೀಕಾಂತ ಅಗಸಾಲ(ಆರ್ಯ ಔಷಧಿ)ಶ್ರೀಧರ ಪೂಜಾರಿ,ಜೀವನ ಸುತಾರಿಯಾ ಪ್ರಕಾಶಗೌಡ( ಎವಿನ್ ಫಾರ್ಮಾ)ಗಣಪತಿ ಹೆಗಡೆ (ಪೆಂಟಾಕೇರ್ ಫಾರ್ಮಾ) ಪ್ರಶಾಂತ ಶಿರಾಲಿಎಸ್.ಜಿ.ಫೈಟೊಫಾವರ್) ರವಿ ನಾಯಕ್ (ಸಾಗರ ಫಾರ್ಮಾ) ಮಂಜುನಾಥ(ಕ್ಯಾಪ್ರೋ ಫಾರ್ಮಾ) ಮಂಜುನಾಥ (ಜಾಫನ್ ಫಾರ್ಮಾ)ಸೋಮಶೇಖರ( ಯುನಿವಾ ಫಾರ್ಮಾ) ಆನಂದ ಕಾನಡೆ (ಆಚಾರ್ಯ ಸುಶ್ರುತ ಫಾರ್ಮಾ)ಗಜಾನನ ಭಟ್ಟ್ (ರಿವಿಂಟೋ ಫಾರ್ಮಾ) ಮೊದಲಾದ ಔಷದ ಕಂಪನಿ ಪ್ರತಿನಿಧಿಗಳು ಉಚಿತವಾಗಿ ಔಷಧಗಳನ್ನು ನೀಡಿ ಸಹಕರಿಸಿದರು.

ಯೂತ್ ಫಾರ್ ಸೇವಾ ಕಾರ್ಯಕರ್ತರಾದ ಲಕ್ಷ್ಮೀಶ ಗೌಡ, ವಿಶಾಲ ಗೌಡ, ಪ್ರಿಯಾ ಶೇಟ್, ನಾಗವೇಣಿ ಚೆನ್ನಯ್ಯ, ರಮ್ಯಾನಾಯ್ಕ, ಸೌಮ್ಯ, ಶೈನಾಜ್‍ಶೇಖ್, ಸುಷ್ಮಾ ಬಿಳಗಿ, ನಂದೀಶ ವಿ, ನಗ್ಮಾ ಗಡಾದ್, ಸನ್ನಿಧಿನಾಯ್ಕ, ನರ್ಸಿಂಗ್ ಕಾಲೇಜಿನ ಅಶ್ವಿನಿ, ಸುಪ್ರಿತಾ, ಜಯಲಕ್ಷ್ಮೀ,ರಮ್ಯಾ,ಉಮ್ಮೇ ಫಜಿಲಾ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು.

ಆರೋಗ್ಯ ಭಾರತಿ ಜಿಲ್ಲಾ ಕಾರ್ಯದರ್ಶಿ ಡಿ.ಎಸ್ ಹೆಗಡೆ ನಿರೂಪಿಸಿದರು. ಶೈನಾಜ್ ಸಂಗಡಿಗರು ಪ್ರಾರ್ಥಿಸಿದರು ಅನಿಲ ನಾಯಕ ಸ್ವಾಗತಿಸಿದರು, ಯೂತ್ ಫಾರ್ ಸೇವಾ ಸಂಯೋಜಕ ಉಮಾಪತಿ ಭಟ್ಟ್ ಪ್ರಾಸ್ತಾವಿಕ ಮಾತನಾಡಿದರು.ಲಕ್ಷ್ಮೀಶ ಗೌಡ ವಂದಿಸಿದರು.

Share This
300x250 AD
300x250 AD
300x250 AD
Back to top