ಹೊನ್ನಾವರ: ಅಧಿಕಾರಿಗಳ ಪ್ರಯತ್ನ ಹಾಗೂ ಸಮಿತಿ ಸದಸ್ಯರ ಸಹಕಾರದಿಂದ ತಾಲೂಕಿನಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕ ಜಾರಿಯಾಗಿ ಬಡಜನರ ಜೀವನದಲ್ಲಿ ಉತ್ಸಾಹ ಕಾಣುವಂತಾಗಿದೆ ಎಂದು ಹೊನ್ನಾವರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಣ್ಣಪ್ಪ ಎಂ ನಾಯ್ಕ ಹೇಳಿದರು.
ಅವರು ಗುರುವಾರ ಹೊನ್ನಾವರ ತಾಲೂಕು ಪಂಚಾಯತ್ ಸಭಾಭವನದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಆಹಾರ, ವಿದ್ಯುತ್, ಸಾರಿಗೆ, ಉದ್ಯೋಗ ವಿನಿಮಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ನೀಡಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಸದಸ್ಯರಾದ ಗಣಪತಿ ಗೌಡ, ಮಾರುತಿ ಮೊಗೇರ್, ವಿಭಾ ಗಾವಂಕರ್, ಕೃಷ್ಣ ಮಾರಿಮನೆ, ಗಣಪತಿ ಹಳ್ಳೆರ್, ಜೈನಾಭಿ ಸಾಬ್, ಮಾದೇವ ಗೌಡ, ಗುರುರಾಜ ನಾಯ್ಕ, ನಾರಾಯಣ ಭಟ್, ಆದರ್ಶ್ ನಾಯ್ಕ, ಜಗದೀಶ್ ನಾಯ್ಕ, ಮಂಜುನಾಥ ನಾಯ್ಕ, ಅಭಿಷೇಕ ತಾಂಡೇಲ್, ಹೆನ್ರಿ ಲಿಮಾ ಇವರುಗಳು ಉಪಸ್ಥಿತರಿದ್ದರು. ಸಭೆಯಲ್ಲಿ ತಾಲೂಕು ಪಂಚಾಯತ್ ವ್ಯವಸ್ಥಾಪಕ ರಾಮ ಭಟ್ ಸ್ವಾಗತಿಸಿ, ವಂದಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಯಶೋಗಾಥೆ ಕಿರುಪುಸ್ತಕವನ್ನು ವಿತರಿಸಲಾಯಿತು.
ಗ್ಯಾರಂಟಿ ಯೋಜನೆಗಳಿಂದ ಬಡವರ ಜೀವನದಲ್ಲಿ ಉತ್ಸಾಹ
