ಸಂಭಾಜಿನಗರ: ಮಹಾರಾಣಾ ಪ್ರತಾಪ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ರಾಷ್ಟ್ರೀಯ ವೀರರೇ ಹೊರತು ಮೊಘಲ್ ಚಕ್ರವರ್ತಿ ಔರಂಗಜೇಬನಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಶುಕ್ರವಾರ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಮೇವಾರ್ ದೊರೆಯ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಸಿಂಗ್, ಔರಂಗಜೇಬ್ ಅಥವಾ ಬಾಬರ್ ಅವರನ್ನು ವೈಭವೀಕರಿಸುವವರು ದೇಶದ ಮುಸ್ಲಿಮರನ್ನು ಅವಮಾನಿಸುತ್ತಾರೆ ಎಂದು ಹೇಳಿದರು.
ಎಡಪಂಥೀಯ ಒಲವು ಹೊಂದಿರುವ ಸ್ವಾತಂತ್ರ್ಯಾನಂತರದ ಇತಿಹಾಸಕಾರರು ರಾಣಾ ಪ್ರತಾಪ್ ಮತ್ತು ಶಿವಾಜಿ ಮಹಾರಾಜರಿಗೆ ಸರಿಯಾದ ಮನ್ನಣೆ ನೀಡಲಿಲ್ಲ, ಆದರೆ ಔರಂಗಜೇಬನನ್ನು ಶ್ಲಾಘಿಸಿದರು. ಔರಂಗಜೇಬ್ ಒಬ್ಬ ವೀರ ಎಂದು ಭಾವಿಸುವವರು ಮೊಘಲ್ ಚಕ್ರವರ್ತಿಯನ್ನು ಧರ್ಮಾಂಧ, ಕ್ರೂರ ಆಡಳಿತಗಾರ ಎಂದಿದ್ದಾರೆ. ಪಂಡಿತ್ ಜವಾಹರಲಾಲ್ ನೆಹರು ಅವರು ಕೂಟ ಔರಂಗಜೇಬನನ್ನು ಧರ್ಮಾಂಧ ಎಂದು ಕರೆದಿದ್ದಾರೆ ಎಂದರು.
ಮಹಾರಾಣಾ ಪ್ರತಾಪ್ ತನ್ನ ಸ್ವಾಭಿಮಾನವನ್ನು ಎತ್ತಿಹಿಡಿಯಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದನು ಮತ್ತು ಮೊಘಲ್ ಚಕ್ರವರ್ತಿ ಅಕ್ಬರ್ನ ಪ್ರಾಬಲ್ಯವನ್ನು ಪ್ರಶ್ನಿಸಿದನು ಎಂದು ಸಿಂಗ್ ಹೇಳಿದ್ದಾರೆ.