ದಾಂಡೇಲಿ : ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ಆಶ್ರಯದಡಿ ನಗರದಲ್ಲಿ ವಿಶ್ವ ಅಖಂಡ ನಮೋಕಾರ ಮಹಾ ಮಂತ್ರ ಪಠಣ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಯಿತು.
ಸುಮಾರು ಒಂದುವರೆ ಗಂಟೆಗಳವರೆಗೆ ಸಾಮೂಹಿಕವಾಗಿ ನಮೋಕಾರ ಮಹಾ ಮಂತ್ರವನ್ನು ಪಠಿಸಲಾಯಿತು. ಈ ಸಂದರ್ಭದಲ್ಲಿ ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟಿನ ಅಧ್ಯಕ್ಷ ಸಂದೇಶ್ ಎಸ್.ಜೈನ್, ಕಾರ್ಯಾಧ್ಯಕ್ಷ ನಾಗೇಂದ್ರನಾಥ ಎನ್.ಬಿ, ಪ್ರಧಾನ ಕಾರ್ಯದರ್ಶಿ ಮಹಾವೀರ ನೇರ್ಲೆಕರ ಹಾಗೂ ಸಮಾಜದ ಪ್ರಮುಖರುಗಳಾದ ಮಹಾವೀರ ಬಂಡಿ, ಎಸ್.ಕೆ.ಬನ್ಸಾಲಿ, ಉದಯ ಶಹಾ, ಅಭಯ ಸದಲಗಿ, ಪ್ರಕಾಶ ಜೈನ್, ಅಜಿತ್ ಕರಡೆನ್ನವರ, ಶಾಂತಿನಾಥ ಟೋಪನ್ನವರ, ವನಮಾಲಾ ಘಾಳಿ, ಸುರೇಶ ಗಂದಿಗವಾಡ, ನರೇಶ ಬನ್ಸಾಲಿ, ಸುಶೀಲ್ ಬನ್ಸಾಲಿ, ಲೀಲಾ ಬನ್ಸಾಲಿ, ಸುರೇಶ ನೆರ್ಲೇಕರ, ನಾಗರತ್ನಾ ಟೋಪನ್ನವರ, ಪದ್ಮಾವತಿ ಘಾಳಿ, ರಾಣಿ ಜೈನ್, ಚಂದಾ ಜೈನ್, ಉಜ್ವಲಾ ಶಹಾ, ನೀಲು ಚೋಪ್ರಾ, ಅರ್ಚನಾ ನೆರ್ಲೇಕರ, ಪದ್ಮಾ ತಿಪ್ಪಣ್ಣವರ, ಶೋಭಾ ನಾಗೇಂದ್ರನಾಥ, ರಾಜಶ್ರೀ ಸದಲಗಿ, ಪದ್ಮಶ್ರೀ ಜೈನ್ ಹಾಗೂ ಜೈನ ಸಮಾಜ ಬಾಂಧವರು ಉಪಸ್ಥಿತರಿದ್ದರು.