Slide
Slide
Slide
previous arrow
next arrow

ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆಯಡಿ ಅರ್ಜಿ ಆಹ್ವಾನ

300x250 AD

ಅಂಕೋಲಾ: 2025-26ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆಯಡಿ ಪ್ರಸ್ತಾವನೆ ಆಧಾರಿತವಲ್ಲದ ಕಾರ್ಯಕ್ರಮಗಳಾದ ಕಾಳುಮೆಣಸು, ಕಂದುಬಾಳೆ, ಅಂಗಾಂಶ ಬಾಳೆ, ಅನಾನಸ್‌, ಮಾವು, ಡ್ರ್ಯಾಗನ್‌, ರಾಂಬೂತನ್‌, ಹಲಸು, ಹೈಬ್ರೀಡ್‌ ತರಕಾರಿ, ಬಿಡಿ ಹೂವು, ಗೇರು ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಗಳನ್ನು ಪ್ಲಾಸ್ಟಿಕ್‌ ಹೊದಿಕೆ, ಕಾಳುಮೆಣಸು, ಗೇರು, ಮಾವು ಪುನಃಶ್ಚೇತನ ಕಾರ್ಯಕ್ರಮಗಳು, ಜೇನುಪೆಟ್ಟಿಗೆ ಹಾಗೂ ಕುಟುಂಬ ಖರೀದಿ ಕುರಿತು ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅದೇ ರೀತಿ ಪ್ರಸ್ತಾವನೆ ಆಧಾರಿತ ಕಾರ್ಯಕ್ರಮಗಳಾದ ಅಣಬೆ ಉತ್ಪಾದನಾ ಘಟಕ ನಿರ್ಮಾಣ, ನೀರು ಸಂಗ್ರಹಣಾ ಘಟಕ ನಿರ್ಮಾಣ, 20 ಎಚ್‌.ಪಿ.ಟ್ರಾಕ್ಟರ್‌ ಖರೀದಿಗೆ ಆಸಕ್ತ ರೈತರುಗಳು ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಯಾಂತ್ರಿಕರಣ ಯೋಜನೆಯಡಿ ಅಲ್ಯೂಮಿನಿಯಮ್‌ ಏಣಿ, ವೀಡ ಕಟರ್‌, ಹುಲ್ಲು ಕತ್ತರಿಸುವ ಯಂತ್ರ, ಅಡಿಕೆ ಸುಲಿಯುವ ಯಂತ್ರ, ಕಾಳುಮೆಣಸು ಬಿಡಿಸುವ ಯಂತ್ರ, ಕಾರ್ಬನ್‌ ಫೈಬರ್‌ ದೋಟಿ, ಮರ ಕತ್ತರಿಸುವ ಯಂತ್ರ, ಸಿಂಪಡಣಾ ಯಂತ್ರ ಇತ್ಯಾದಿಗಳ ಖರೀದಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಜೇಷ್ಟತೆ, ಅನುದಾನ ಹಾಗೂ ಮಾರ್ಗಸೂಚಿ ಅನುಸಾರ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ, ಅಂಕೋಲಾ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

300x250 AD
Share This
300x250 AD
300x250 AD
300x250 AD
Back to top