ಶಿರಸಿ: ಅಡಕೆ ಸುಲಿಯುವ ಮಷಿನ್ ಗೆ ಸಿಲುಕಿ ಮಹಿಳೆಯೋರ್ವಳು ಸಾವನ್ನಪ್ಪಿದ್ದಾಳೆ. ಶಿರಸಿ ತಾಲೂಕಿನ ಹೊಸಬಾಳೆಯ ಶೋಭಾ ವೆಂಕಟೇಶ ಹೆಗಡೆ (60) ಮೃತ ದುರ್ದೈವಿಯಾಗಿದ್ದು, ಕೃಷಿ ಕೆಲಸ ಮಾಡುವಾಗ ಚಾಲಿ ಸುಲಿಯುವ ಮಷಿನ್‌ಗೆ ಸೀರೆ ಸೆರಗು ಸಿಕ್ಕಿದ್ದರ ಪರಿಣಾಮ ಮೃತಳಾಗಿದ್ದಾಳೆ. ಮೃತಳಾದ ಶೋಭಾ ಕಾಂಗ್ರೆಸ್ ಮುಖಂಡ ವೆಂಕಟೇಶ ಹೆಗಡೆ ಹೊಸಬಾಳೆ ಧರ್ಮಪತ್ನಿಯಾಗಿದ್ದು, ಮಹಿಳೆಯ ದಾರುಣ ಸಾವು ತಾಲೂಕಿನಲ್ಲಿ ದಿಗ್ಭ್ರಮೆ ಮೂಡಿಸಿದೆ.
ಅಡಕೆ ಸುಲಿಯುವ ಮಷಿನ್‌ಗೆ ಸಿಲುಕಿ ಶೋಭಾ ಹೊಸಬಾಳೆ ಸಾವು
