ಶಿರಸಿ: ಇಲ್ಲಿನ ಚಂದನ ಪದವಿ ಪೂರ್ವ ಕಾಲೇಜಿನಲ್ಲಿ ಮಾ.10ರಂದು ವಿದ್ಯಾರ್ಥಿಗಳಿಗೆ ಶಿರಸಿಯ ಜಾನಪದ ಕಲೆಯಾದ ಬೇಡರವೇಷ ಪ್ರದರ್ಶನವನ್ನು ನಡೆಸಲಾಯಿತು. ಬೇಡರವೇಷ ಪಾತ್ರಧಾರಿ ಅಕ್ಷಯ ಹನುಮಾನ ವ್ಯಾಯಮಶಾಲೆ ಅವರು ಬೇಡರವೇಷ ಕುಣಿತವನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಬೇಡರವೇಷ ಕಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರಾಚಾರ್ಯರಾದ ಡಾ.ಆರ್.ಎಮ್. ಭಟ್ ನೀಡಿದರು.ಸಂಸ್ಥಾಪಕರು ಹಾಗೂ ಕಾರ್ಯದರ್ಶಿಗಳಾದ ಎಲ್.ಎಮ್. ಹೆಗಡೆ ಬೇಡರವೇಷ ಪಾತ್ರಧಾರಿ ಹಾಗೂ ಸಹಾಯಕರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಚಂದನ ಕಾಲೇಜಿನಲ್ಲಿ ಬೇಡರ ವೇಷ ಪ್ರದರ್ಶನ
