Slide
Slide
Slide
previous arrow
next arrow

ಕಜಾಪ ಶಿರಸಿಯಿಂದ ಮಾ.16ರಿಂದ ತಾಳಮದ್ದಳೆ ಪಂಚಕ

300x250 AD

ಶಿರಸಿ: ಮಾರ್ಚ 16 ರಿಂದ 20 ರ ವರೆಗೆ ಕರ್ನಾಟಕ ಜಾನಪದ ಪರಿಷತ್ತು ಶಿರಸಿ ಆಶ್ರಯದಲ್ಲಿ ವಿವೇಕಾನಂದ ನಗರದ ವರಸಿದ್ಧಿವಿನಾಯಕ ದೇವಸ್ಥಾನದಲ್ಲಿ ಇಳಿಹೊತ್ತು 3:30 ರಿಂದ 7 ಗಂಟೆವರೆಗೆ 5 ದಿನಗಳ ಕಾಲ ಸಂಧಾನ ಪೂರ್ವರಂಗ ಆಖ್ಯಾನ ಪ್ರದರ್ಶನವನ್ನು ಸ್ಥಳೀಯ ಕಲಾವಿದರಿಂದ ಆಯೋಜಿಸಲಾಗಿದೆ. ಕಜಾಪ ಶಿರಸಿಯ ಅಧ್ಯಕ್ಷರಾದ ಕೃಷ್ಣ ಪದಕಿ ಕಾರ್ಯಕ್ರಮ ಉದ್ಘಾಟಿಸಲಿದ್ದು,  ಮುಖ್ಯ ಅತಿಥಿಗಳಾಗಿ ಕಜಾಪ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಡಾ.ವೆಂಕಟೇಶ ಎಲ್ ನಾಯ್ಕ ಉಪಸ್ಥಿತರಿರಲಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ಗೋಪಾಲಕೃಷ್ಣ ಭಾಗ್ವತ ಕಡತೋಕ ಮತ್ತು ಮದ್ದಳೆವಾದಕರಾಗಿ ಶ್ರೀಪಾದ ಭಟ್ಟ ಮೂಡಗಾರು ಸಾಥ್ ನೀಡಲಿದ್ದು, ಮುಮ್ಮೇಳದಲ್ಲಿ ಎಚ್.ಬಿ.ನಾಯಕ, ಕೇಶವ ಬಿ ಹೆಗಡೆ, ಜಿ.ಎ.ಹೆಗಡೆ,  ಸೀತಾರಾಮ ಚಂದು, ಗಣಪತಿ ಭಟ್ ವರ್ಗಾಸರ, ಟಿ.ಎಂ.ರಮೇಶ, ಬಾಲಚಂದ್ರ ಭಟ್ ಕರಸುಳ್ಳಿ, ಎಂ.ವಿ.ಹೆಗಡೆ ಅಮಚಿಮನೆ, ಹನುಮಂತಪ್ಪ ಸಾಲಿ, ರೋಹಿಣಿ ಹೆಗಡೆ, ನಿರ್ಮಲಾ ಗೋಳಿಕೊಪ್ಪ, ರೇಣುಕಾ ನಾಗರಾಜ, ಸಂಧ್ಯಾ ಅಜಯ್, ಲತಾ ಗಿರಿಧರ, ಭವಾನಿ ಭಟ್, ಸುಜಾತಾ  ಹೆಗಡೆ ದಂಟಕಲ್, ಸುಮಾ ಹೆಗಡೆ ಗಡಿಗೆಹೊಳೆ  ಅರ್ಥ ಹೇಳಲಿದ್ದಾರೆ. ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಶಸ್ವಿಗೊಳಿಸಬೇಕಾಗಿ ಕಜಾಪ ಶಿರಸಿ ಪದಾಧಿಕಾರಿಗಳು, ಸದಸ್ಯರು ಹಾಗೂ ವರಸಿದ್ಧಿವಿನಾಯಕ ದೇವಸ್ಥಾನದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು  ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top