Slide
Slide
Slide
previous arrow
next arrow

ತಾಳ್ಮೆ,ಸಹನೆ,ಕೃತತ್ವ ಶಕ್ತಿಯ ಒಟ್ಟೂ ರೂಪವೇ ‘ಸ್ತ್ರೀ’: ನ್ಯಾ.ಬಿ.ಸಿ ಚಂದ್ರಶೇಖರ

300x250 AD

ಹೊನ್ನಾವರ : ಸ್ತ್ರೀಯರೆಂದರೆ ಸಮಾಜ ಅವರನ್ನು ಆದಿ ಶಕ್ತಿಯ ಸ್ವರೂಪಿ ಎಂದು ಗೌರವಿಸುತ್ತಾರೆ. ತಾಳ್ಮೆ, ಸಹನೆ, ಕೃತತ್ವ ಶಕ್ತಿಯ ಒಟ್ಟೂ ರೂಪವೇ ಸ್ತ್ರೀ ಎಂದು ಹೊನ್ನಾವರ ಸಿವಿಲ್ ಜಡ್ಜ ಹಿರಿಯ ವಿಭಾಗ ನ್ಯಾಯಾಧೀಶ ಬಿ.ಸಿ. ಚಂದ್ರಶೇಖರ ಅಭಿಪ್ರಾಯಪಟ್ಟರು.

ಅವರು ಹೊನ್ನಾವರದ ನ್ಯೂ ಇಂಗ್ಲೀಷ್ ಸ್ಕೂಲ್‌ನಲ್ಲಿ ತಾಲೂಕಾ ಕಾನೂನೂ ಸೇವಾ ಸಮಿತಿ, ತಾಲೂಕಾ ವಕೀಲ ಸಂಘ, ತಾಲೂಕಾಡಳಿತ, ಶಿಕ್ಷಣ ಇಲಾಖೆ, ಅಭಿಯೋಜನಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರ ಹಿತ ಕಾಯುವ ಕುರಿತು ಇರುವ ಕಾನೂನುಗಳ ಸೌಲಭ್ಯಗಳನ್ನು ಪಡೆದು ಸಬಲರಾಗಬೇಕು. ಮಹಿಳೆ ಮನೆಯ ದೀಪವಾಗಿ, ಸಮಾಜದ ಬೆಳಕಾಗಿ ಬದುಕನ್ನು ಎತ್ತರಿಸಬೇಕು ಎಂದರು. 

ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಕಿತ್ತೂರ್ ರಾಣಿ ಚೆನ್ನಮ್ಮ ಪ್ರಶಸ್ತಿ ಭಾಜನರಾದ ಕರ್ಕಿ ಮಠದಕೇರಿ ಅಂಗನವಾಡಿ ಶಿಕ್ಷಕಿ ಮಹಾಲಕ್ಷ್ಮಿ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

300x250 AD

ಹೊನ್ನಾವರ ಜೆ.ಎಮ್.ಎಫ್.ಸಿ ನ್ಯಾಯಾಧೀಶ ಈರಣ್ಣ ಹುಣಸಿಕಟ್ಟೆ, ನ್ಯೂ ಇಂಗ್ಲೀಷ್ ಶಾಲೆ ಮುಖ್ಯೋಪಾಧ್ಯಾಯ ಜಯಂತ್ ನಾಯಕ್, ಸಿ.ಡಿ.ಪಿ.ಓ ವನಿತಾ ದೇಶಭಂಡಾರಿ, ಪ.ಪಂ ಮುಖ್ಯಾಧಿಕಾರಿ ಯೇಸು ಸುಬ್ರಹ್ಮಣ್ಯ, ಸಹಾಯಕ ಸರ್ಕಾರಿ ಅಭಿಯೋಜಕಿ ಸಂಪದಾ ಗುನಗಾ, ತಹಶೀಲ್ದಾರ ಪ್ರವೀಣ್ ಕರಾಂಡೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಂಗಲಾ ಗೌಡ ಆಶಯ ಗೀತೆ ಹಾಡಿದರು. ಜ್ಯೋತಿ ಪಟಗಾರ್ ವಂದಿಸಿದರು. 

ವೇದಿಕೆಯಲ್ಲಿ ವಕೀಲ ನಾಗರಾಜ್ ಕಾಮತ್, ಪ್ರಮೋದ್ ಭಟ್, ವಕೀಲ ಸಂಘದ ಅಧ್ಯಕ್ಷ ವಿ.ಎಂ ಭಂಢಾರಿ, ಕಾರ್ಯದರ್ಶಿ ಉದಯ ನಾಯ್ಕ ಚಿತ್ತಾರ ಉಪಸ್ಥಿತರಿದ್ದರು. 

Share This
300x250 AD
300x250 AD
300x250 AD
Back to top