Slide
Slide
Slide
previous arrow
next arrow

ಅಂಚೆ ಇಲಾಖೆಯ ಪತ್ರ ಲೇಖನ ಸ್ಪರ್ಧೆ: ಚೈತನ್ಯ ಕಾಲೇಜಿನ ಚಂದನಾ ಪ್ರಥಮ

300x250 AD

ಶಿರಸಿ: ಭಾರತೀಯ ಅಂಚೆ ಇಲಾಖೆ, ಮುಖ್ಯ ಪೋಸ್ಟ್ ಮಾಸ್ಟರ್‌ ಜನರಲ್‌ಕಚೇರಿ, ಕರ್ನಾಟಕ ಅಂಚೆ ವೃತ್ತ, ಬೆಂಗಳೂರು ಇವರು 2024-25ನೇ ಸಾಲಿನ ಢಾಯಿ ಆಖರ್ (Dhai Akhar) ಅಡಿಯಲ್ಲಿ ನಡೆಸಿದ ಪತ್ರ ಲೇಖನ ಅಭಿಯಾನದಲ್ಲಿ “The Joy of Writing: Importance of Letters in a Digital Age” ಎಂಬ ವಿಷಯದ ಮೇಲೆ 18 ವರ್ಷದೊಳಗಿನ ವಿಭಾಗದಲ್ಲಿ ಎಂ.ಇ.ಎಸ್. ಚೈತನ್ಯ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯಾದ ಕು. ಚಂದನಾ ಜಿ.ಆರ್. ಆಂಗ್ಲ ಭಾಷೆಯಲ್ಲಿ ಪತ್ರ ಲೇಖನ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.
ವಿದ್ಯಾರ್ಥಿನಿಯ ಪಾಲಕರಾದ ರೇವಣಪ್ಪ ಜಿ. ಮತ್ತು ಶ್ರೀಮತಿ ಜಾನಕಮ್ಮ ಇವರು ತಮ್ಮ ಮಗಳ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುತ್ತಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಿ.ಎಮ್. ಹೆಗಡೆ ಮುಳಖಂಡ ಮತ್ತು ಸದಸ್ಯರು, ಉಪಸಮಿತಿಯ ಅಧ್ಯಕ್ಷರಾದ ಕೆ.ಬಿ.ಲೋಕೇಶ್ ಹೆಗಡೆ ಮತ್ತು ಸದಸ್ಯರು ಹಾಗೂ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಘವೇಂದ್ರ ಹೆಗಡೆಕಟ್ಟೆ ಮತ್ತು ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿಯವರು ಹರ್ಷ ವ್ಯಕ್ತಪಡಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top