ಹೊನ್ನಾವರ :ವಿಜ್ಞಾನವು ಜ್ಞಾನವನ್ನು ಹೆಚ್ಚುತ್ತದೆ. ಇದು ಪ್ರಗತಿಯ ಸಂಕೇತವಾಗಿದೆ, ಮೂಢನಂಬಿಕೆಯನ್ನು ಹೋಗಲಾಡಿಸುತ್ತದೆ ಎಂದು ವಿಶ್ರಾಂತ ಪ್ರಾಚಾರ್ಯ ವಿ.ಜಿ. ಹೆಗಡೆ ಗುಡ್ಗೆ ಹೇಳಿದರು.
ಅವರು ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಇದು ವೈಜ್ಞಾನಿಕ ಯುಗವಾಗಿದೆ ವೈಚಾರಿಕತೆಯನ್ನು ನಾವು ಮೈಗೂಡಿಸಿಕೊಳ್ಳಬೇಕಾಗುತ್ತದೆ, ವಿದ್ಯಾರ್ಥಿಗಳು ವಿಜ್ಞಾನಿಗಳಾಗುವ ಗುರಿಯನ್ನು ಹೊಂದಿರಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಉಮೇಶ ಹೆಗಡೆ ಮಾತನಾಡಿ ವೈಚಾರಿಕತೆಯನ್ನು ಅಳವಡಿಸಿಕೊಂಡ ದೇಶವು ಪ್ರಗತಿ ಹೊಂದಲು ಸಾಧ್ಯ, ನಾವು ನಮ್ಮ ಜೀವನದಲ್ಲಿ ವೈಚಾರಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಆಡಳಿತಾಧಿಕಾರಿ ಎಂ.ಎಸ್.ಹೆಗಡೆ ಗುಣವಂತೆ ಮಾತನಾಡಿ ವಿಜ್ಞಾನ ಮತ್ತು ತಂತ್ರಜ್ಞಾನದ ಫಲವಾಗಿಯೇ ಇಂದು ನಾವು ವಿಶ್ವದ ಯಾವುದೇ ಮೂಲೆಯಲ್ಲಿ ಜರುಗಿದ ಘಟನೆಯನ್ನು ಕ್ಷಣಮಾತ್ರದಲ್ಲಿ ತಿಳಿಯಬಹುದಾಗಿದೆ. ನಮ್ಮ ಶಾಲೆಯಲ್ಲಿ ಜರುಗಿದ ವಿಜ್ಞಾನ ವಸ್ತು ಪ್ರದರ್ಶನವು ಪ್ರಗತಿಯ ಸಂಕೇತವಾಗಿದೆ. ಇದು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುತ್ತದೆ ಎಂದರು.
ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ಸ್ವಾಗತಿಸಿದರು. ಶಿಕ್ಷಕಿ ಸಂಗೀತ ಯಾಜಿ ವಂದಿಸಿದರು, ಅಂಜನಾ ಶೆಟ್ಟಿ ನಿರ್ವಹಿಸಿದರು.