ಸಿದ್ದಾಪುರ : ಮಾಧ್ಯಮ ಕ್ಷೇತ್ರದಲ್ಲಿ ಕಳೆದ ಎರಡು ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದ ಶಿವಶಂಕರ ಕೋಲಸಿರ್ಸಿ (44) ಅವರು ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ವರದಿಗಾರಿಕೆ ಜೊತೆಗೆ ಬ್ಯಾಂಕ್ ಆಪ್ ಬರೋಡಾದಲ್ಲಿ ಆರ್ಥಿಕ ಸಾಕ್ಷರತೆ ಕೇಂದ್ರದ ಸಮಾಲೋಚಕರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದರು. ಅವರು Tv-9, ಕನ್ನಡ ನ್ಯೂಸ್ ನಲ್ಲಿ ಕೆಲ ವರ್ಷಗಳ ಕಾಲ ಉತ್ತರಕನ್ನಡ ಜಿಲ್ಲಾ ವರದಿಗಾರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಕನ್ನಡ ಜನಾಂತರಂಗ,ಕನ್ನಡ ಪ್ರಭ, ಕರಾವಳಿ ಮುಂಜಾವು, ಸೇರಿದಂತೆ ಅನೇಕ ಮಾಧ್ಯಮದಲ್ಲಿ ಕಾರ್ಯ ಸೇವೆ ಸಲ್ಲಿಸಿದ್ದಾರೆ.
ಸದ್ಯ ರಾಜ್ ನ್ಯೂಸ್ ನಲ್ಲಿ ಸಿದ್ದಾಪುರ ತಾಲೂಕ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೋಮವಾರವು ಸಹ ವರದಿಗಾರಿಕೆಗೆ ತೆರಳಿದ್ದರು. ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದಿರಲಿಲ್ಲ.
ಆದರೆ ತಡರಾತ್ರಿ ಏಕಾಏಕಿಯಾಗಿ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನ ಸ್ಥಳೀಯ ಆಸ್ಪತ್ರೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಮುನ್ನವೆ ಶಿವಶಂಕರ್ ಪ್ರಾಣಬಿಟ್ಟಿದ್ದಾರೆ. ಮೃತರು ಪತ್ನಿ, ತಂದೆ ತಾಯಿ ಹಾಗೂ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ. ಮೃತರ ನಿಧಕ್ಕೆ ಸ್ಥಳೀಯ ವರದಿಗಾರರು ಗಣ್ಯರು ಕಂಬನಿ ಮಿಡಿದಿದ್ದಾರೆ. ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಂತಾಪ ಸೂಚಿಸಿದ್ದಾರೆ.