Slide
Slide
Slide
previous arrow
next arrow

ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ

300x250 AD

ಕಾರವಾರ: ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಕಾರವಾರ ಉತ್ತರ ಕನ್ನಡ ಜಿಲ್ಲೆ ಹಾಗೂ ಹಾಸನ ಜಿಲ್ಲೆಯ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

 ಮಾ.2 ರಿಂದ ಮಾ.6 ರ ವರೆಗೆ ಹಾಸನ ಜಿಲ್ಲೆಯಲ್ಲಿ ನಡೆಯುವ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ 27 ಯುವ ಜನರು ಪಾಲ್ಗೊಂಡಿದ್ದಾರೆ. ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಿಂದ 12, ದಿವೇಕರ ಮಹಾವಿದ್ಯಾಲಯದ 11,ಶಿವಾಜಿ ಮಹಾವಿದ್ಯಾಲಯದ 2, ಅಂಜುಮಾನ್ ಮಹಾ ವಿದ್ಯಾಲಯದ 2 ಯುವ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ಎಲ್ಲಾ ಮೈ ಭಾರತ ಕಾರ್ಯಕರ್ತರು ಮೊದಲಿಂದಲೂ ನೆಹರು ಯುವ ಕೇಂದ್ರ ಕಾರವಾರದ ವಿವಿಧ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಂಡಿರುತ್ತಾರೆ.

300x250 AD

 ಫೆಬ್ರವರಿ 7 ರಿಂದ 11 ರವರೆಗೆ ಕಾರವಾರಕ್ಕೆ ಹಾಸನ ಜಿಲ್ಲೆಯಿಂದ 27 ಯುವ ಜನರು ಜಿಲ್ಲೆಗೆ ಆಗಮಿಸಿದ್ದು, 5 ದಿನಗಳ ಕಾಲ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮನ್ನು ಯಶ್ವಸಿಯಾಗಿ ನಡೆಸಲಾಗಿತ್ತು ಎಂದು ನೆಹರು ಯುವ ಕೇಂದ್ರದ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top