ಕುಮಟಾ: ಅಜ್ಞಾನ ಮತ್ತು ಕಾನೂನು ತಿಳುವಳಿಕೆ ಕೊರತೆಯಿಂದ ಅರಣ್ಯ ಭೂಮಿ ಹಕ್ಕಿನಿಂದ ವಂಚಿತರಾಗುವ ಅರಣ್ಯವಾಸಿಗಳಿಗೆ ಕಾನೂನು ಜಾಗೃತಾ ಮತ್ತು ಜ್ಞಾನವನ್ನ ವೃದ್ಧಿಸುವ ಉದ್ಧೇಶದಿಂದ ಅರಣ್ಯವಾಸಿಗಳಿಗೆ ಕಾನೂನು ಜಾಗೃತಾ ಜಾಥಾ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅವರು ಮಾ.೩ ರಂದು ಕುಮಟಾ ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಬೇಡ್ಕರ ಭವನದ ಎದುರು ಸಂಘಟಿಸಲಾದ ಬೃಹತ್ ಅರಣ್ಯವಾಸಿಗಳ ಕಾನೂನು ಜಾಗೃತಾ ಜಾಥಾವನ್ನು ಉದ್ದೇಶಿಸಿ ಮಾತನಾಡಿದ್ದರು.
ಜಾಥವು ಕಾನೂನು ಅಡಿಯಲ್ಲಿ ವೈಯಕ್ತಿಕ ನಿರ್ದೀಷ್ಟ ದಾಖಲಾತಿ ಅವಶ್ಯಕತೆವಿಲ್ಲದಿರುವುದು, ಮಂಜೂರಿಗೆ ಸಾಂಧರ್ಬಿಕ ದಾಖಲೆಗಳ ಮಾಹಿತಿ, ಕಾನೂನು ಭಾಹಿರ ಅರ್ಜಿ ತಿರಸ್ಕಾರಕ್ಕೆ ಕಡಿವಾಣ, ಅಸಮರ್ಪಕ ಜಿಪಿಎಸ್‌ಗೆ ಕಾನೂನು ಪರಿಹಾರ, ಅರಣ್ಯವಾಸಿಗೆ ಕಾನೂನಿನಲ್ಲಿ ಬದಕುವ ಹಕ್ಕಿನ ಮಾಹಿತಿ ಉದ್ದೇಶದಿಂದ ಹಮ್ಮಿಕೊಂಡು ರಾಜ್ಯದ ೧೬ ಜಿಲ್ಲೆಗಳಲ್ಲಿ ಸುಮಾರು ೫೦೦ ಕ್ಕೂ ಮಿಕ್ಕಿ ಅರಣ್ಯವಾಸಿಗಳ ಕ್ಷೇತ್ರದಲ್ಲಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದರು.
ಜಿಲ್ಲೆಯಲ್ಲಿ ೧೬೩ ಗ್ರಾಮ ಪಂಚಾಯತಿಯಲ್ಲಿ ಜಾಥಾ :
ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ೧೬೩ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾನೂನು ಜಾಗೃತಾ ಜಾಥದ ಕಾರ್ಯಕ್ರಮ ಮೂಲಕ ಅರಣ್ಯವಾಸಿಗಳಿಗೆ ಕಾನೂನು ಜ್ಷಾನ ನೀಡಲು ಪ್ರಯತ್ನಿಸಲಾಗುತ್ತಿದೆ. ಅಲ್ಲದೇ ಈ ಕುರಿತು ಕಾನೂನು ಕರಪತ್ರ ಸಹಿತ ವಿತರಿಸಲಾಗುವುದೆಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಕರ್ನಾಟಕ ೧೬ ನೇ ಸ್ಥಾನ:
ದೇಶದಲ್ಲಿ ಅರಣ್ಯವಾಸಿ ಮತ್ತು ಅರಣ್ಯ ಪ್ರದೇಶದ ಪ್ರಮಾಣದಲ್ಲಿ ಕರ್ನಾಟಕ ಮೊದಲನೇ ೫ ಸ್ಥಾನದಲ್ಲಿದ್ದರೇ, ಅರಣ್ಯ ಹಕ್ಕು ಅನುಷ್ಠಾನದಲ್ಲಿ ೧೫ ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ೨,೯೪,೦೦೦ ಅರ್ಜಿಗಳಲ್ಲಿ ಕೇವಲ ೧೭,೫೬೧ ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ. ರಾಜ್ಯದಲ್ಲಿ ಬಂದಂತ ಅರ್ಜಿಗಳಲ್ಲಿ ಕೇವಲ ಶೇ ೫.೩ ರಷ್ಟು ಅರಣ್ಯವಾಸಿಗಳಿಗೆ ಮಾತ್ರ ಹಕ್ಕು ದೊರಕಿರುವುದು ವಿಷಾದಕರ ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ತಾಲೂಕಾ ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರು ವಹಿಸಿ ತಾಲೂಕಾಧ್ಯಂತ ಕಾನೂನು ಜಾಗ್ರತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಯಾಕುಬ್ ಸಾಬ ಮಿರ್ಜಾನ್, ಸೀತಾರಾಮ ನಾಯ್ಕ, ಮಹೇಂದ್ರ ನಾಯ್ಕ, ಶಂಕರ ಗೌಡ, ಪ್ರಕಾಶ ನಾಯ್ಕ ಕತಗಾರ,ರಾಜು ಗೌಡ, ಶಾಂತಿ ಆರೇರ, ಕಮಲಾಕ್ಷಿ ಹಿರೆಗುತ್ತಿ, ಜಗದೀಶ ಹರಿಕಾಂತ, ಹಾಗೂ ಕಾರ್ಯಕ್ರಮ ನಿರೂಪಣೆ ಸಂಚಾಲಕ ರಾಘವೇಂದ್ರ ನಾಯ್ಕ ಕವಂಚೂರು ನಿರ್ವಹಿಸಿದರು.