Slide
Slide
Slide
previous arrow
next arrow

ಸಿ.ಎಂ.ಎಫ್.ಅರ್.ಐ. ಸಂಸ್ಥಾಪನಾ ದಿನ ಆಚರಣೆ

300x250 AD

ಕಾರವಾರ: ಸಿ.ಎಂ.ಎಫ್.ಆರ್.ಐ. ಸಂಸ್ಥಾಪನ ದಿನದ ಅಂಗವಾಗಿ ಆಚರಣೆಯನ್ನು ಕಾರವಾರದ ಪ್ರಾದೇಶಿಕ ಕೇಂದ್ರ ಕಛೇರಿಯಲ್ಲಿ ಸೋಮವಾರ ಅಚರಿಸಲಾಯಿತು. ಪ್ರಾದೇಶಿಕ ಕೇಂದ್ರದ ಸಂಶೋಧನೆ ಸಾಧನೆಗಳು ಮತ್ತು ಭವಿಷ್ಯದ ಯೋಜನೆಗಳನ್ನು ವಿವರಿಸಲು ಪ್ರದರ್ಶನವನ್ನು ಅಯೋಜಿಸಲಾಯಿತು.
ಕೇಂದ್ರಿಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯು ದಿನಾಂಕ 3.2.1947 ರಲ್ಲಿ ಸ್ಥಾಪಿಸಲಾಯಿತು, ಇದರ ಮುಖ್ಯ ಶಾಖೆ ಕೇರಳದ ಕೊಚ್ಚಿನಲ್ಲಿದ್ದು, ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಪ್ರಾದೇಶಿಕ ಕೇಂದ್ರ ಕಛೇರಿಯು 1948ರಲ್ಲಿ “ಬಂಗುಡೆ ಸಂಶೋಧನಾ ಕೇಂದ್ರವನ್ನು ಭಾರತದಲ್ಲಿ ಬಂಗುಡೆ ಸಂಶೋಧನೆಗಾಗಿ ಸ್ಥಾಪಿಸಿದ ಮೊಟ್ಟ ಮೊದಲ ಕೇಂದ್ರ ಇದಾಗಿದೆ.
ಕಾರವಾರದ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಕಡಲ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ, ಡಾ. ಶಿವಕುಮಾರ್ ಹರಗಿ ಪ್ರದರ್ಶನವನ್ನು ಉದ್ಘಾಟಿಸಿದರು.
ಕಾರವಾರದ ಪ್ರಾಥಮಿಕ, ಪ್ರೌಡಶಾಲೆ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ಕೇಂದ್ರಗಳ ವಿದ್ಯಾರ್ಥಿಗಳು ಪ್ರಾದೇಶಿಕ ಕೇಂದ್ರಕ್ಕೆ ಭೇಟಿ ನೀಡಿ ಪ್ರದರ್ಶಿಸಿದ ವಿವಿಧ ವಾಣಿಜ್ಯವಾಗಿ ಪ್ರಮುಖ ಜಾತಿಯ ಸಮುದ್ರ ಮೀನುಗಳನ್ನು, ಅಲಂಕಾರಿಕ ಮೀನುಗಳು, ಸಂಶೋಧನೆ ಪ್ರಬಂಧಗಳು, ಸಂಸ್ಥೆಯ ಪ್ರಕಟಣೆಗಳು, ಪ್ರಪಂಚದಲ್ಲಿ ಕೇಂದ್ರವು ಮೊದಲ ಬಾರಿಗೆ ಮೂರು ಜಾತಿಯ ಮೀನುಗಳಾದ ಬಾಣ ಅಥವಾ ಯಾಬಿಟ್ ಮೀನು, ಏರಿ ಅಥವ ಕರಿ ಪಾಲು ಮೀನು ಹಾಗೂ ಬಿಳಿ ಪಾಲು ಮೀನು ಸಂತಾನೋತ್ಪತಿ ಮಾಡುವುದನ್ನು ಸಾಧಿಸಿದ ಮೀನುಮರಿಗಳನ್ನು ಪ್ರದರ್ಶಿಸಲಾಯಿತು.
ಸಂಸ್ಥೆಯು ಸೀ ವೀಡ್, ಚಿಪ್ಪು ಕಲ್ಲು ಹಾಗೂ ಮೀನಿನಿಂದ ಹಲವಾರು ಔಷಧಗಳನ್ನು ಮಧುಮೇಹ, ರಕ್ತದೊತ್ತಡ, ಹೈಪೋಥೈರಾಯ್ಕೆಸಮ್, ಉದ್ವೇಗ, ಜಿಎಮ್‌ಇ, ಹೈಪರ್ಕೊಲೆಸ್ಟ್ರಾಲ್, ರೋಗನಿರೋಧಕ, ಅಸ್ಟಿಯೊಪೊರೊಟಿಕ್ ಹಾಗೂ ಅರಿಥಿಟ್‌ಗೆ ಕಂಡು ಹಿಡಿದಿರುವ ಔಷಧಗಳನ್ನು ಪ್ರದರ್ಶಿಸಲಾಯಿತು.
ಜೀವಂತ ಕುರುಡಿ ಮೀನುಗಳನ್ನು ಮಾರಾಟ ಮಾಡಲಾಯಿತು. ಕೇಂದ್ರದ ವಿಜ್ಞಾನಿಗಳು, ತಾಂತ್ರಿಕ ಅಧಿಕಾರಿಗಳು, ಅಡಳಿತ್ಮಾತಕ ಅಧಿಕಾರಿಗಳು, ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿ ಕೇಂದ್ರದ ಚಟುವಟಿಕೆಗಳ ಬಗ್ಗೆ ಸಂರ್ದಶಕರಿಗೆ ಮಾಹಿತಿ ನೀಡಿದರು.
ಕಾರವಾರದ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ವಿಭಾಗದ ಸಹಾಯಕ ಪ್ರಧ್ಯಾಪಕ ಡಾ. ಹನುಮಂತ್ ಮತ್ತಿತರರು ಉಪಸ್ಥಿತರಿದ್ದರು. ಸಿ.ಎಂ.ಎಫ್.ಆರ್.ಐ ಕಾರವಾರ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಡಾ.ಸಿ. ಕಾಳಿದಾಸ್ ಸ್ವಾಗತಿಸಿದರು. ಹಿರಿಯ ವಿಜ್ಞಾನಿ ಹಾಗೂ ಪ್ರರ್ದಶನ ಸಂಯೋಜಕರು ಡಾ. ಪುರುಷೋತ್ತಮ ಜಿ. ಬಿ. ನಿರೂಪಿಸಿ, ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top